ಊರಿನ ಹೆಮ್ಮೆಯ ಪುತ್ರರಿಗೆ ಪ್ರೀತಿಯ ಸನ್ಮಾನದ ಗೌರವ
ಧಾರವಾಡ
ಯಾದವಾಡ ಗ್ರಾಮ ಪಂಚಾಯತಿಯಿಂದ ಸೈನ್ಯಕ್ಕೆ ಆಯ್ಕೆಯಾದ ಊರಿನ ಹೆಮ್ಮೆಯ ಯುವಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಯಾದವಾಡ ಗ್ರಾಮ ಪಂಚಾಯಿತಿ ಮುಂದೆ ಅಧ್ಯಕ್ಣರಾದ ಪಾರ್ವತಿ ಹಿರೇಮಠ, ಲಕ್ಷ್ಮಿ ಗಳಗಿ, ಸದಸ್ಯರಾದ ಮಡಿವಾಳಪ್ಪ ದಿಂಡಲಕೊಪ್ಪ, ಶಿವಾನಂದ ಬೆಂಡಿಗೇರಿ, ಮಂಜುನಾಥ ಬಂಡೆಪ್ಪನವರ, ಮಮತಾಜಬೀ ಹಾವಗಾರ, ಶಿವಪ್ಪ ಕುಂಬಾರ್, ಪಿಡಿಓ ರಾಜೇಶ್ವರಿ ಚಲವಾದಿ ಸೇರಿದಂತೆ ಊರಿನ ಪ್ರಮುಖರಾದ ಅಜ್ಜಪ್ಪ ಬೆಂಡಿಗೇರಿ,
ಚಂದ್ರು ಬೆಂಡಿಗೇರಿ, ಮಾಬುಸುಬಾನಿ ಬೇಟಗೇರಿ, ಮಂಜು ಹಡಪದ, ಶೇಖಣ್ಣಾ ಕುಂಬಾರ, ರಾಚಯ್ಯಾ ಹಳ್ಳಿಗೇರಿಮಠ, ನಾಗೇಶ ಯಲಿಗಾರ, ಬಸವರಾಜ ಮಾಕಣ್ಣವರ್ ಸೇರಿದಂತೆ ಊರಿನ ಇತರರು ಪಾಲ್ಗೊಂಡಿದ್ದರು.
ಸನ್ಮಾನ ಸ್ವೀಕರಿಸಿದ ಸೈನ್ಯಕೆ ಸೇರ್ಪಡೆಯಾದ ಯುವಕರ ಹೆಸರು ಹೀಗಿದೆ.
1) ಕಾಸೀಮ ಕುತುಬುದ್ದೀನ ಭಾವಿಮನಿ (ಪಿಯುಸಿ) army ಗೆ ಸೇರ್ಪಡೆ _(20 ವರ್ಷ)
2) ರಾಘವೇಂದ್ರ ಯಲಿಗಾರ (ಬಿಕಾಂ) army ಗೆ ಸೇರ್ಪಡೆ (22 ವರ್ಷ)
3) ಮೃತ್ಯುಂಜಯ ಕುಸುಗಲ್ (ಪಿಯುಸಿ ಸೈನ್ಸ)Army technical (19 ವರ್ಷ)
4) ಸಚಿನ ಕುಸುಗಲ್ ಎಂಜಿನೀಯರಿಂಗ್ ( CISF) 23 ವರ್ಷ ಈಗಾಗಲೇ ಹುದ್ದೆಗೆ ಸೇರ್ಪಡೆಯಾಗಿದ್ದು, ಅವನ ಅನುಪಸ್ಥಿತಿಯಲ್ಲಿ ಅವರ ಪೋಷಕರು ಸನ್ಮಾನ ಸ್ವೀಕರಿಸಿದ್ರು.
5 ) ಮೆಹಬೂಬಸುಬಾನಿ ಮುಜಾವರ army (21 ವರ್ಷ) ಈಗಾಗಲೇ 3 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಅಂಗನವಾಡಿ ಕಾರ್ಯರ್ತೆಯಾಗಿ ಸೇವಾ ನಿವೃತ್ತಿ ಹೊಂದಿದ ಯಾದವಾಡ ಗ್ರಾಮದವರೇ ಆದ ಜಮಮನ್ನಣೆ ಗಳಿಸಿದ್ದ ಅನುಸುಯಾ ನೇಕಾರ ಇವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.