ಈದ್ಗಾದಲ್ಲಿ ಗಣೇಶ ಪ್ರತಿಷ್ಠಾನ ಕುರಿತಾದ ಹೈಕೋರ್ಟ್ ಅರ್ಜಿ ತಿರಸ್ಕೃತ : ಬೆಚ್ಚಿ ಬಿದ್ದ ಯೂಸೂಫ್ ಸವಣೂರ!
POEERCITY NEWS: HUBBALLI.
ಗಣೇಶ ಹಬ್ಬದ ಆಚರಣೆಗಾಗಿ ಅವಳಿನಗರದಲ್ಲಿ ನಡೆಯುತ್ತಿರುವ ಪರವಿರೋಧದ ರಾಜಕೀಯ ಹಗ್ಗಜಗ್ಗಾಟದಲ್ಲಿ ಹೈ ಕೋರ್ಟ್ ಗೆ ಸಲ್ಲಿಕೆಯಾಗಿದ್ದ ಅಂಜುಮನ್ ಅರ್ಜಿ ತಿರಸ್ಕೃತ ಗೊಂಡಿದೆ .
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿನ ಗಣೇಶ ಪ್ರತಿಷ್ಠಾನದ ವಿಚಾರ ಇಂದು ಮತ್ತಷ್ಟು ಕಾವೇರಿದ್ದು. ಪಾಲಿಕೆ ಕಚೇರಿಗೆ ನಿನ್ನೆಯಿಂದಲೇ ಅಹೋರಾತ್ರಿ ಧರಣಿ ನಡೆಸಿರುವ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಅನುಮತಿಗಾಗಿ ಪಾಲಿಕೆ ಆಯುಕ್ತರ ಬಾಗಿಲಲ್ಲೆ ಗಣೇಶ ಪ್ರತಿಮೆಯೊಂದಿಗೆ ಪ್ರತಿಭಟನೆ ಮುಂದುವರೆಸಿದ್ದಾರೆ.
ಇದೆವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿ.
ಕಳೆದ ವರ್ಷ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾನಕ್ಕೆ ಪಾಲಿಕೆಯ ಆಯುಕ್ತರು ಅನುಮತಿ ನೀಡಿದ್ದರು. ಆದ್ರೆ ಇಂದಿನ ಪಾಲಿಕೆ ಆಯುಕ್ತರು ಕಾಂಗ್ರೆಸ್ ಪಕ್ಷದ ಏಜಂಟರಂತೆ ವರ್ತಿಸುತ್ತಿರುವುದು ಖಂಡನೀಯ ಹಾಗೂ ಸುಪ್ರೀಂಕೋರ್ಟ್ ಆದೇಶ ವನ್ನು ಗಾಳಿಗೆ ತೂರಿ ಕಾನೂನು ಉಲ್ಲಂಘಿಸಿದ್ದಾರೆಂದು ಆರೋಪಿಸಿದರು. ಇದೆ ಪರಿಸ್ಥಿತಿ ಮುಂದುವರೆದಿದ್ದೆ ಆದರೆ ಮುಸ್ಲೀಮರ ಪ್ರಾರ್ಥನೆಗೂ ನಾವು ತಡೆ ತರುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆ ವೇಳೆಗೆ ಗಣೇಶ ಪ್ರತಿಷ್ಠಾನಕ್ಕೆ ಹೈಕೋರ್ಟ್ ಮೊರೆ ಹೊಗಿದ್ದ ಅಂಜುಮನ್ ಸಂಸ್ಥೆಯು ಗಣೇಶ ಪ್ರತಿಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಿಸ್ಕರಿಸಿದ್ದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸೂಫ್ ಸವಣೂರ ತಂಡಕ್ಕೆ ಗೆ ಭಾರಿ ಮುಖಭಂಗವಾಗಿದೆ.
ಇನ್ನೂ ಈದ್ಗಾ ಮೈದಾನದಲಿ ಕಳೆದ ವರ್ಷದಂತೆ ಇ ವರ್ಷವೂ ಮೂರು ದಿನಗಳ ಕಾಲದ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲೆ ಬೆಕೆಂದು ಅವಳಿನಗರದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಪಾಲಿಕೆ ಆಯುಕ್ತರ ಕಚೇರಿ ಬಾಗಿಲಲ್ಲಿ ಪ್ರತಿಭಟನೆ ಭಜನೆ ಮುಂದುವರೆದಿದೆ.