ಸ್ಥಳೀಯ ಸುದ್ದಿ

ಇಂದಿನ ಬಜೆಟ್ ಅಭಿವೃದ್ಧಿ ಬಜೆಟ್ – ಮೇಯರ್ ಅಂಚಟಗೇರಿ

ಧಾರವಾಡ

ಇಂದು ರಾಜ್ಯ ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರ ನೇತೃತ್ವದಲ್ಲಿ ನಡೆದ 2 ನೇ ಬಜೆಟ್ ಮಂಡನೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಅಭಿವೃದ್ಧಿ ಪೂರಕವಾಗಿವೆ ಎಂದು ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ ಅಂಚಟಗೇರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಜೆಟ್ ಪ್ರಮುಖ ಅಂಶಗಳು ಈ ಕೆಳಗಿನಂತೆ ಇವೆ.

  • ಹುಬ್ಬಳ್ಳಿ ಇ.ಎಸ್.ಐ ಆಸ್ಪತ್ರೆ ಸಾಮರ್ಥ್ಯವನ್ನು 50 ರಿಂದ 100 ಕ್ಕೆ ಏರಿಕೆ.
  • ಕಿತ್ತೂರು ತಾಲೂಕಿನ 50 ಹಾಸಿಗೆಯ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ನಿರ್ಧಾರ.
  • ಪಿಡಬ್ಲ್ಯೂಡಿ ವತಿಯಿಂದ 100 ಅಂಬೇಡ್ಕರ್ ಹಾಸ್ಟೆಲ್ ನಿರ್ಮಾಣಕ್ಕೆ 200 ಕೋಟಿ ಅನುದಾನ ನೀಡಲು ಅನುಮೋದನೆ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸ್ಪೂರ್ತಿ ಯೋಜನೆಗೆ 12.5 ಕೋಟಿ ಮೊತ್ತಕ್ಕೆ ಅನುಮೋದನೆ.
  • ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 54.6 ಕೋಟಿ ಶೇರು ಬಂಡವಾಳ ಎತ್ತುಳಿ ಮಾಡಲು ಅನುಮತಿ.
  • ಕರ್ನಾಟಕ ರಾಜ್ಯ ಹಣಕಾಸು ನಿಗಮದ ಎನ್ ಪಿ ಎ ದ ತಿರುವಳಿಗೆ ಒನ್ ಟೈಮ್ ಇತ್ಯರ್ಥಕ್ಕೆ ಅವಕಾಶ ನೀಡಲು ತೀರ್ಮಾನ.
  • ಸರ್ಕಾರದ ಎಚ್ ಆರ್ ಎಂ ಎಸ್ ವ್ಯವಸ್ಥೆಗೆ ಹೊಸ ಸಾಫ್ಟ್ವೇರ್ ಅಳವಡಿಕೆಗೆ 40 ಕೋಟಿ ರೂಪಾಯಿ ಅನುದಾನಕ್ಕೆ ಒಪ್ಪಿಗೆ.
  • ಪಿಎಂ-ಅಭೀಮ್ ಯೋಜನೆ ಅಡಿ 114 ನಗರ ಕ್ಲಿನಿಕ್ ಗೆ ಅವಕಾಶ ಕೊಟ್ಟಿದ್ದು ನಮ್ಮ ಕ್ಲಿನಿಕ್ ಆಗಿ ಇವು ಮಾರ್ಪಾಡುಕೊಳ್ಳಲಿವೆ.
  • ಎ ಎನ್ ಎಮ್ ಸೆಂಟರ್ಗೆ ಮತ್ತಷ್ಟು ಶಕ್ತಿ ನೀಡಲು ಸಿಬ್ಬಂದಿ ನಿಯೋಜನೆಗೆ ಸಂಪುಟ ಒಪ್ಪಿಗೆ. ಒಟ್ಟು 847 ಕೇಂದ್ರಗಳ ಮೇಲ್ದರ್ಜೆಗೇರಿಸಲು 71.56 ಕೋಟಿ ಮೊತ್ತಕ್ಕೆ ಒಪ್ಪಿಗೆ.
  • ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5% ಸೈಟನ್ನು ಮೃತ ಮಾಜಿ ಸೈನಿಕರ ಕುಟುಂಬಕ್ಕೆ ನೀಡಲು ನಿಯಮಾವಳಿ ತಿದ್ದುಪಡಿಗೆ ಸಂಪುಟ ತೀರ್ಮಾನ.

ಬಡವರಿಗೆ, ಉದ್ಯೋಗ ಆಕಾಂಕ್ಷಿಗಳಿಗೆ, ಹಾಗೂ ಹಿಂದುಳಿದ ವರ್ಗದವರಿಗೆ ಅನುಕೂಲವಾಗುವ ದೃಷ್ಟಿಯಿಂದ ಉತ್ತಮ ರೀತಿಯಾಗಿ ಬಜೆಟ್ ಮಂಡನೆ ಮಾಡಿದ ನಮ್ಮೆಲ್ಲರ ನೆಚ್ಚಿನ ನಾಯಕರು, ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ರವರಿಗೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ತಮ್ಮ ಸೇವಕ
ಈರೇಶ ಅಂಚಟಗೇರಿ
ಮಹಾಪೌರರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

Related Articles

Leave a Reply

Your email address will not be published. Required fields are marked *