ಆರೋಪಿ ಅಭಿಷೇಕಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದ : ಕೋರ್ಟ್!
ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್ ಇಟ್ಕೊಂಡು ಜೈಲು ಪಾಲಾಗಿದ್ದ ಅಭಿಷೇಕ ಹಿರೇಮಠ!
ಹುಬ್ಬಳ್ಳಿ: ಇಂದಿನಿಂದ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಈಗಾಗಲೇ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿದ್ದು, ಕೋಮುಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಅಭಿಷೇಕ ಹಿರೇಮಠ ಪೊಲೀಸ್ ಬಿಗಿ ಭದ್ರತೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾನೆ.
ನಿಜ..ಅಭಿಷೇಕ ಹಿರೇಮಠ ವಿವಾದಾತ್ಮಕ ಪೋಸ್ಟ್ ಮಾಡುವ ಮೂಲಕ ಹಳೇ ಹುಬ್ಬಳ್ಳಿ ಪೊಲಿಸ್ ಠಾಣೆಯ ಗಲಭೆಗೆ ಕಾರಣವಾಗಿದ್ದ ಯುವಕನಿಗೆ ಪರೀಕ್ಷೆ ಬರೆಯಲು ಕೋರ್ಟ್ ಅನುಮತಿ ನೀಡಿರುವ ಬೆನ್ನಲ್ಲೇ ಇಲ್ಲೀನ ಗೋಕುಲ ರಸ್ತೆಯ ಮಹೇಶ್ ಪಿಯು ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಮಹೇಶ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯಲಿರುವ ಆರೋಪಿ ಅಭಿಷೇಕ ಇಂದು ಬಿಜಿನೆಸ್ ಸ್ಟಡೀಸ್ ವಿಷಯದ ಪರೀಕ್ಷೆಗೆ 10:15ಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲಿದ್ದಾನೆ. ಹುಬ್ಬಳ್ಳಿಯ ಕಾರಾಗ್ರಹದಿಂದ ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆಗೆ ಬರಲಿರುವ ಅಭಿಷೇಕ. ಪರೀಕ್ಷೆ ಮುಗಿದ ನಂತರ ಪುನಃ ಪೊಲೀಸ್ ಭದ್ರತೆಯಲ್ಲಿ ಜೈಲು ಸೇರಲಿದ್ದಾನೆ.
ಇನ್ನೂ ಪರೀಕ್ಷೆಯ ದಿನಗಳು ಮುಗಿಯುವವರೆಗೂ ಅವಕಾಶ ಕಲ್ಪಿಸಿ ಕೊಡುವಂತೆ ಪೊಲಿಸ್ ಇಲಾಖೆಗೆ ಕೋರ್ಟ್ ಸೂಚನೆ ನೀಡಿದ್ದು, ಅಭಿಷೇಕ ಪರ ಜಾಮೀನಿಗೆ ಸಲ್ಲಿಸಿದ್ದ ಮಧ್ಯಂತರ ಜಾಮೀನು ತಿರಸ್ಕರಿಸಿದ್ದು, ನ್ಯಾಯಾಲಯ ಪರೀಕ್ಷೆಗೆ ಬರೆಯಲು ಅನುವು ಮಾಡುಕೊಟ್ಟಿದೆ.