ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಅವಳಿನಗರದ DCP ಗೋಪಾಲ್ ಬ್ಯಾಕೋಡ್ ಬೆಂಗಳೂರಿಗೆ ವರ್ಗಾವಣೆ!
powercity news:
ಹುಬ್ಬಳ್ಳಿ
ಗೃಹ ಸಚಿವ ಜಿ ಪರಮೇಶ್ವರ ಅವಳಿನಗರಕ್ಕೆ ಬಂದು ಹೋದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಢ ಕಮಿಷನರೇಟನ ಪ್ರಾಮಾಣಿಕ ಹಾಗೂ ದಕ್ಷತೆಗೆ ಹೆಸರಾಗಿದ್ದ ಉಪ ಪೊಲಿಸ್ ಆಯುಕ್ತರಾದ ಐಪಿಎಸ್ ಅಧಿಕಾರಿ ಗೋಪಾಲ್ ಎಮ್ ಬ್ಯಾಕೋಡ್ ಅವರನ್ನು ಸರಕಾರದ ಮುಂದಿನ ಆದೇಶದ ವರೆಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವಿಧಾನ ಸೌಧ ಬೆಂಗಳೂರಿಗೆ ಕರ್ತವ್ಯ ವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
ಇನ್ನೂ ಉಪ ಪೊಲಿಸ್ ಆಯುಕ್ತರಾದ ಗೋಪಾಲ್ ಬ್ಯಾಕೋಡ್ ಇವರ ತೆರವಾದ ಸ್ಥಳಕ್ಕೆ ಡಿ ವೈ ಎಸ್ಪಿ ರವೀಶ್ ಸಿ ಆರ್. ಇವರಿಗೆ ಮುಂಬಡ್ತಿ ನಿಡಿ ಆದೇಶಿಸಿರುವ ರಾಜ್ಯ ಸರ್ಕಾರ ಹುಬ್ಬಳ್ಳಿ ಧಾರವಾಡದ ಉಪ ಪೊಲಿಸ್ ಆಯುಕ್ತರು ಅಪರಾಧ ಮತ್ತು ಸಂಚಾರ ವಿಭಾಗ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಸ್ಥಳ ನಿಯುಕ್ತಿಗೊಳಿಸಿದೆ.