ಸ್ಥಳೀಯ ಸುದ್ದಿ
ಅವಳಿ ನಗರದ ಅಭಿವೃದ್ಧಿಗಾಗಿ ಸಿಎಂ ಭೇಟಿಯಾದ ಮೇಯರ್
ಧಾರವಾಡ
ಇಂದು ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರನ್ನು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಭೇಟಿ ಮಾಡಿ, ಮನವಿ ಪತ್ರವನ್ನು ಸಲ್ಲಿಸಿದ್ರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರುವಂಥ 110 ಕೋಟಿ ರೂಪಾಯಿ ಬಾಕಿ ಹಣ, ಪಿಂಚಣಿ ಹಣ 121 ಕೋಟಿ, ವಿದ್ಯುತ್ ಶುಲ್ಕದ ಬಾಕಿ ಹಣ 64 ಕೋಟಿ, ಅಂದರೆ ಒಟ್ಟು 295 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
ಸಿಎಂ ಸಹ ಇದಕ್ಕೆ ಸ್ಪಂದಿಸಿ, ಕೂಡಲೇ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಹೇಳಿದರು. ಮನವಿ ಪತ್ರದ ಪ್ರತಿಗಳನ್ನು, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ರವರಿಗೆ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ರವರಿಗೆ ಹಾಗೂ ಶ್ರೀ ಬಸವರಾಜ ಹೊರಟ್ಟಿ ರವರಿಗೂ ಕೂಡ ಸಲ್ಲಿಸಲಾಯಿತು.