ಸ್ಥಳೀಯ ಸುದ್ದಿ
ಅಭಿಮಾನಿಗಳ ಧೈರ್ಯವೇ ನನ್ನ ಶಕ್ತಿ ಎಂದ ವಿನಯ ಕುಲಕರ್ಣಿ
ಬೆಂಗಳೂರು
ಕ್ಷೇತ್ರದಿಂದ ಹೊರಗೆ ಇದ್ದರೂ ಕೂಡ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಬಂದು ನನ್ನ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಂಡಿದ್ದು, ನಾನು ಯಾವತ್ತಿಗೂ ತಮಗೆಲ್ಲಾ ಚಿರ ಋಣಿ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬೆಂಗಳೂರಿನಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಕಷ್ಟದ ಕಾಲದಲ್ಲೂ ತಮ್ಮ ಕುಟುಂಬದ ಜೋತೆಗೆ ನಿಂತಿರುವ ಕ್ಷೇತ್ರದ ಜನತೆಗೆ ನಾನು ಸದಾಕಾಲ ನನ್ನ ಜೀವನ ಮುಡುಪಾಗಿಡುತ್ತೇನೆ ಎನ್ನುವ ಮೂಲಕ ತಾವು ಕ್ಷೇತ್ರದ ಜನರ ಮೇಲೆ ಇರುವ ಕಾಳಜಿ ತೋರಿಸಿದ್ರು.