ಕರ್ತವ್ಯ ಮೆರೆದ ಘಟಪ್ರಭಾ 108 ಆರೋಗ್ಯ ಸಿಬ್ಬಂದಿ: ಜಂಗ್ಲಿಸಾಬ್ ಅತ್ತಾರ್
ಬೆಳಗಾವಿ/ಘಟಪ್ರಭಾ: ಬೈಕ್ ಹಾಗೂ ಆಲ್ಟೋ ಕಾರಿನ ಮದ್ಯ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.
ಗೋಕಾಕ ದಿಂದ ತುಕಾನಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರ ಹಾಗೂ ನಾಗನೂರ್ ದಿಂದ ಗೋಕಾಕ ಕಡೆ ತೆರಳುತ್ತಿದ್ದ ಆಲ್ಟೋ ಕಾರಿನ ನಡುವೆ ಮುಖಾ-ಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ.ಬೈಕ ಸವಾರ ಮಹಾದೇವ ಬೋಜಿ (37)ಗಂಭೀರ ಪೆಟ್ಟು ಬಿದ್ದಿದು,ಮತ್ತು ಹಿಂಬದಿ ಸಿಟಿನಲ್ಲಿ ಕುಳಿತಿದ್ದ ಪತ್ನಿ ಲಕ್ಷ್ಮೀ ಬೋಜಿ (32) 108ರ ತಲೆಗೆ ಪೆಟ್ಟು ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಆರೋಗ್ಯ ಕವಚ ವಾಹನ ದಲ್ಲಿ ಹೆಚ್ಚಿನ ಚಿಕಿತ್ಸೆ ಗೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಎಂದು ಹೇಳಲಾಗಿದೆ. ಘಟನೆಯಲ್ಲಿ ಕಾರು ಹಾಗೂ ಬೈಕ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.
ಈ ಮಧ್ಯೆ ಗಾಯಾಳುಗಳ ಬಳಿ ಇದ್ದ ಬಂಗಾರ ಹಾಗೂ ನಗದು ಹಣವನ್ನು ಅವರ ಸಂಬದಿಕರಿಗೆ ಘಟಪ್ರಭಾ ಆರೋಗ್ಯ ಕವಚದ ಸಿಬ್ಬಂದಿ ಪೈಲೆಟ್ ಜಂಗ್ಲಿಸಾಬ ಅತ್ತಾರ ಹಾಗೂ ಇ. ಎಂ.ಟಿ.ಕೌಸರ.ಪಾಶ್ಚಾಪುರ ಇವರುಗಳು ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.