ಅದೇ ಖದರ್- ಅದೇ ಜೋಶ್- ಅದೇ ಚಾರ್ಮ್, ನೋ ಡೌಟ್ He. is the ledear
ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪ್ರಾಬಲ್ಯ ಹಾಗೂ ಜನಮನ್ನಣೆ ಕಡಿಮೆಯಾಗದೇ ಹೆಚ್ಚುತ್ತಲೇ ಇದೆ.
ಇದಕ್ಕೆ ಸಾಕ್ಷಿಯಾಗಿದ್ದು, ಸವದತ್ತಿಯಲ್ಲಿ ನಡೆದ ಪರಿಷತ್ ಚುನಾವಣೆಯ ಸಮಾವೇಶ.
ಈ ಸಮಾವೇಶದಲ್ಲಿ ವಿನಯ ಕುಲಕರ್ಣಿ ಅವರನ್ನು ವೇದಿಕೆಯಲ್ಲಿ ನೋಡಿದ ಸಾವಿರಾರು ಮಂದಿಯಲ್ಲಿ ಕೇಳಿ ಬಂದ ಮಾತುಗಳಿವು He is the Leader ಅಂತಾ.
ಧಾರವಾಡ ಜಿಲ್ಲೆಗೆ ಹೋಗದಂತೆ ನ್ಯಾಯಾಲಯದ ನಿರ್ಬಂಧ ಇರುವುದರಿಂದ , ತಮ್ಮದೇ ಶೈಲಿಯಲ್ಲಿ ಕುಂದಾನಗರಿಯ ಗಡಿಯ ಊರಾದ ಸವದತ್ತಿಯಲ್ಲಿ ಸಮಾವೇಶ ಮಾಡುವ ಮೂಲಕ ನಾಯಕನಾದವನಿಗೆ ಆ ಊರು – ಈ ಊರು ಎನ್ನುವ ಮಾತೇ ಇಲ್ಲಾ ವೇದಿಕೆ ಒಂದಿದ್ದರೆ ಸಾಕು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಗದಗ, ಹಾವೇರಿ , ಧಾರವಾಡ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆ ಪ್ರಚಾರದ ಸಮಾವೇಶದಲ್ಲಿ ಎಲ್ಲರ ಕೇಂದ್ರ ಬಿಂದು ಆಗಿದ್ದ ಇವರು
ಅದೇ ಖದರ್- ಅದೇ ಜೋಶ್- ಅದೇ ಚಾರ್ಮನಲ್ಲಿ ಕಂಡು ಬಂದ್ರು.
ಸಚಿವರಾಗಿದ್ದಾಗ ಹೇಗಿದ್ದರೋ ಅದೇ ರೀತಿ ವೈಟ್ ಡ್ರೆಸನಲ್ಲಿ ಮಿಂಚಿದ್ರು ವಿನಯ ಕುಲಕರ್ಣಿ ಅವರು.
ಇನ್ನು ಈ ಕಾರ್ಯಕ್ರಮದಲ್ಲಿ ಅವರ ಪತ್ನಿ ಕೂಡ ವೇದಿಕೆ ಮೇಲೆ ಪಾಲ್ಗೊಂಡಿದ್ದರು.
ಮಗಳು ವೈಶಾಲಿ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದಳು.
ಈ ಸಮಯದಲ್ಲಿ ವಿನಯ ಕುಲಕರ್ಣಿ ಅವರ 25 ನೇ ವರ್ಷದ ಮದುವೆ ವಾರ್ಷಿಕೋತ್ಸವದ ಅಂಗವಾಗಿ ವೇದಿಕೆ ಮೇಕೆ ಕೇಕ್ ಕಟ್ ಮಾಡಿ, ಗಿಪ್ಟ್ ಕೊಡಲಾಯಿತು.
ಸಮಾವೇಶದಲ್ಲಿ, ಎಐಸಿಸಿ ನಾಯಕರಾದ ಬಿ.ಕೆ.ಹರಿಪ್ರಸಾದ,
ಕಾಂಗ್ರೆಸ ಪಕ್ಷದ ಪರಿಷತ್ ಅಭ್ಯರ್ಥಿ ಸಲೀಂ ಅಹ್ಮದ
ಧಾರವಾಡ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮೊದಲ ಪ್ರಾಶಸ್ರ್ಯದ ಮತಗಳನ್ನು ನೀಡುವುದರ ಮೂಲಕ ಕೈ ಅಭ್ಯರ್ಥಿ ಸಲೀಂ ಅಹ್ಮದ ಗೆಲ್ಲಿಸುವಂತೆ ಮನವಿ ಮಾಡಿದ್ರು ಕೈ ನಾಯಕರು.