ಸ್ಥಳೀಯ ಸುದ್ದಿ

ಅಕ್ರಮ ಮರಳುಗಾರಿಕೆ ಅಧಿಕಾರಿಗಳ ನಿರ್ಲಕ್ಷ್ಯ

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೊರ ಜಿಲ್ಲೆಯಿಂದ ಬಂದು ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಅಧಿಕಾರಿಗಳು ಸಾಥ್ ಕೊಡುತ್ತಿದ್ದಾರಾ? ಎನ್ನುವ ಅನುಮಾನ ಬಲವಾಗಿ ಕಾಡುತ್ತಿದೆ.

ಹೀಗಾಗಿಯೇ ಕೇಂದ್ರ ಸಚಿವರ ತವರು ಜಿಲ್ಲೆ ಧಾರವಾಡದಲ್ಲಿ ಸ್ಯಾಂಡ್ ಮಾಫೀಯಾ ಎನ್ನುವ ಸ್ಟೋರಿಯನ್ನು ಪವರ್ ಸಿಟಿ‌ನ್ಯೂಸನಲ್ಲಿ ಎಕ್ಸಕ್ಲೂಸಿವ್ ಆಗಿ ತೋರಿಸಲಾಗಿತ್ತು.

ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಧಾರವಾಡ ನಗರದಲ್ಲಿ ಸಂಪೂರ್ಣವಾಗಿ ಅಕ್ರಮ ಮರಳು ದಾಸ್ತಾನು ಬಂದ್ ಮಾಡಿಸಿದ್ದಾರೆ. ಆದ್ರೆ ಹುಬ್ಬಳ್ಳಿಯಲ್ಲಿ ಮಾತ್ರ ಪರಿಸ್ಥಿತಿ ತದ್ವಿರುದ್ಧವಾಗಿದೆ.

ಆದ್ರೆ ಹುಬ್ಬಳ್ಳಿಯ ಗ್ರಾಮೀಣ ಹಾಗೂ ನಗರ ಪ್ರದೇಶವನ್ನು ನೋಡಿಕೊಳ್ಳುವ ಗಣಿ ಮತ್ತು ಭೂವಿಜ್ಞಾನ ಇಲಾಕೆಯ ಅಧಿಕಾರಿ ತೇಜಸ್ವಿನಿ ಅವರು ಇದುವರೆಗೂ ಅಕ್ರಮವಾಗಿ ಮರಳು ಸಾಗಾಟ ಹಾಗೂ ದಾಸ್ತಾನು ಮಾಡುವವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲಾ ಎನ್ನುದಕ್ಕೆ ಕೆಲವೊಂದಿಷ್ಟು ಅಕ್ರಮ ದಾಸ್ತಾನಿನ ಬಗ್ಗೆ ಹೆಸರು ಸಮೇತ ನಾವು ಹೇಳ್ತೇವಿ‌ ನೋಡಿ.

ಹುಬ್ಬಳ್ಳಿಯ ಕೆಲವೊಂದು ಪ್ರದೇಶಗಳಾದ,
ಮದನಿ‌ಮಿಯಾ ಮಸ್ಜಿದ ಹಿಂದಗಡೆ,
ಸಿದ್ದಾರೂಢಮಠದ ಹಿಂದೆ ಷಡಕ್ಷರಿ ಮಠದ ಕಡೆಗೆ,
ಕುಂದಗೋಳ ಕ್ರಾಸ್,
ಅಂಚಟಗೇರಿ ಕ್ರಾಸ್,
ಕಲಘಟಗಿ ಕ್ರಾಸ ಬೈಪಾಸ್ ಹತ್ತಿರ, ಅಜ್ಮೀರ್ ನಗರ ಹೋಟೆಲ್ ಕಡೆಗೆ,
ಆಸ್ಮಾ ಇಂಡಸ್ಟ್ರಿಯಲ್ ಒಳಗಡೆಗೆ,
ಎಸ್.ಕೆ.ಮಡ್ಡಿ ಕಡೆಗೆ, ಕಾರವಾರ ರೋಡ ಗುಡ್ಡದ ಕಡೆಗೆ, ಗಬ್ಬೂರ ಕ್ರಾಸ ಕಡೆಗೆ,ಗುಡಿಹಾಳ ರೋಡ್ ನಿಹಾಲ್ ಹಾಲ್ ಹತ್ತಿರ ಕೋಳಿ ಫಾರಂ ಹಿಂದೆ, ಗುಡಿಹಾಳ ರೋಡ ಕಡೆಗೆ hsf ಗಾರ್ಡನ ಕಡೆಗೆ,
ಶಾಂತಿನಗರದ ತುಂಬೆಲ್ಲಾ ಅರ್ಧ ಕಿ.ಮೀ ಒಳಗಡೆ ಹೋದ್ರೆ ಅಕ್ರಮ ಮರಳು ದಂಧೆ ನಡೆಯುತ್ತಿದೆ.
ಇದರ ಜೊತೆ ಜೊತೆಗೆನೆ
ಅಕ್ಷಯ ಪಾರ್ಕ ಕಡೆಗಳಲ್ಲಿ ಅಕ್ರಮ ಉಸುಕು ದಾಸ್ತಾನು ಎಗ್ಗಿಲ್ಲದೇ ನಡೆಯುತ್ತಿದೆ.
ಇಷ್ಟೆಲ್ಲಾ ಇದ್ರೂ ಕೂಡ ಹಿರಿಯ ಅಧಿಕಾರಿ ಚಂದ್ರಶೇಖರ ಅವರು ಸುಮನ್ನಾಗಿದ್ದು ಮಾತ್ರ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪವರ್ ಸಿಟಿ ನ್ಯೂಸ್ ಕನ್ನಡ
ಸತ್ಯ ಸದಾಕಾಲ

Related Articles

Leave a Reply

Your email address will not be published. Required fields are marked *