ಅಕ್ರಮ ಒತ್ತುವರಿ ಆಯ್ತಾ ಡಾ|.ಬಿ.ಆರ್.ಅಂಬೇಡ್ಕರ್ ಮೈದಾನ!
ಹುಬ್ಬಳ್ಳಿ
ವಿವಿಧ ದಲಿತ ಪರ ಸಂಘಟನೆಗಳಿಂದ ಆಯುಕ್ತರಿಗೆ ಮನವಿ!
ಹುಬ್ಬಳ್ಳಿ: ಹುಬ್ಬಳ್ಳಿಯ ಫತೇಶಾ ದರ್ಗಾದ ಬಳಿಯಿರುವ ಡಾ!ಬಾಬಾ ಸಾಹೇಬ್ ಅಂಬೇಡ್ಕರ್ ಸಾರ್ವಜನಿಕ ಮೈದಾನ ವನ್ನು ಪಕ್ಕದ ಆಯುರ್ವೇದ ಕಾಲೇಜಿನ ಆಡಳಿತ ಮಂಡಳಿಯು ಅಕ್ರಮವಾಗಿ ಅತಿಕ್ರಮಿಸುವುದಲ್ಲದೆ ಇಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಗೆ ಕಾಲೇಜಿನ ಭದ್ರತಾ ಸಿಬ್ಬಂದಿಗಳು ಅಡ್ಡಿ ಪಡಿಸುತ್ತಿದ್ದಾರೆ. ಮತ್ತು ಈಗಾಗಲೇ ಅತಿಕ್ರಮಣ ವಾಗಿರುವ ಬಗ್ಗೆ ನ್ಯಾಯಾಲಯದ ತೀರ್ಪು ಮೈದಾನದ ಪರವಾಗಿ ಬಂದಿದ್ದು.
ಪುನಃ ಮೊಂಡತನಕ್ಕೆ ಬಿದ್ದಿರುವ ಕಾಲೇಜು ಆಡಳಿತ ಮಂಡಳಿಯು ಮೈದಾನದ ಜಾಗೆಯಲ್ಲಿನ ಗಿಡಮರಗಳ ಬುಡದಲ್ಲಿ ಕಟ್ಟೆ ಕಟ್ಟುವುದು ಮತ್ತು ಇನ್ನೀತರ ಚಟುವಟಿಕೆಗಳನ್ನು ನಡೆಸುವುದರ ಮೂಲಕ ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ಕೊಡುತ್ತೀಲ್ಲ ವೆಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಆಯುಕ್ತರಿಗೆ ಮನವಿ ಮಾಡಿಕೊಂಡರು.
ಮೈದಾನ ನಿರ್ಮಾಣ ವಾದಾಗಿನಿಂದಲೂ ಅಭಿವೃದ್ಧಿ ವಿಚಾರದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೆ ಬರುತ್ತಿವೆ. ಆದರೂ ಸಹ ಜನಪ್ರತಿನಿಧಿಗಳಾಗಲಿ ಅಥವಾ ಸಂಭಂದಪಟ್ಟ ಅಧಿಕಾರಿಗಳು, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ನಾಯಕರು ಈ ಕಡೆ ಗಮನ ಹರಿಸದಿರುವುದು ನಿಷ್ಕಾಳಜಿ ನಡೆ ಎದ್ದು ಕಾಣುತ್ತಿದೆ ಇದರಿಂದ ಹಳೆ ಹುಬ್ಬಳ್ಳಿ ಭಾಗದ ಅಭಿವೃದ್ಧಿ ಸೊರಗುತ್ತಿದೆ. ಇದರಿಂದ ಸಾರ್ವಜನಿಕರು ಬೇಸರ ವ್ಯಕ್ತ ಪಡಿಸುವಂತಾಗಿದೆ.
ಆದರೆ ಇಷ್ಟೇಲ್ಲದರ ನಡುವೆ ಕಾಲೇಜು ಆಡಳಿತ ಮಂಡಳಿ ವಿಭಾಗದ ಸದಸ್ಯರು ಪಾಲಿಕೆಯೊಂದಿಗೆ ಸಮಜೋತಾ ಮಾಡಿಕೊಳ್ಳುವ ಪ್ರಯತ್ನ ದಲ್ಲಿ ಮೈದಾನದ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಎಲ್ಲ ಸಂಗತಿಗಳು ಕಂಡು ಬರುವ ಆತಂಕ ವ್ಯಕ್ತವಾಗುತ್ತಿದೆ.
ಕೂಡಲೆ ಮಾನ್ಯ ಪಾಲಿಕೆ ಆಯುಕ್ತರು ಇದರ ಬಗ್ಗೆ ಪರಿಸಿಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು. ಮತ್ತು ಮುಂಬರುವ ಎಪ್ರಿಲ್ 14ರಂದು ಬಾಬಾಸಾಹೇಬ್ ಅಂಬೇಡ್ಕರ್ ಮೈದಾನದಲ್ಲಿ ಜರುಗಬಹುದಾದ ಸಂವಿಧಾನ ಶಿಲ್ಪಿ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗು ಬಾಬು ಜಗಜೀವನ ರಾಮ ಅವರ ಜಯಂತಿ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಗೊಳ್ಳುವ ಹಿನ್ನೆಲೆಯಲ್ಲಿ.
ಮೈದಾನವನ್ನು ಸ್ವಚ್ಛ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೆಕೆಂದು ಹುಬ್ಬಳ್ಳಿ ಧಾರವಾಡ ಮ.ಪಾ.ಆಯುಕ್ತ ಕೆ ಗೋಪಾಲಕೃಷ್ಣ ಅವರನ್ನು ಕೊರಿದರು.ಇ ಸಂಧರ್ಭದಲ್ಲಿ
ಉಪಸ್ಥಿತರು:
ಗುರುನಾಥ-ಉಳ್ಳಿಕಾಶಿ
ಪರಶುರಾಮ -ಅರಕೇರಿ
ಮಂಜಣ್ಣ ಉಳ್ಳಿಕಾಶಿ
ಇಝಾಝ್ಹ್ಮದ-ಉಪ್ಪಿನ
ಬಬನ್-ಖೋಜೆ
ದಾದಾಫೀರ ಮುಲ್ಲಾ.
ಲೋಹಿತ-ಗಾಮನಗಟ್ಟಿ
ಹಾಗೂ ಇತರರು ಉಪಸ್ಥಿತರಿದ್ದರು.