ಸ್ಥಳೀಯ ಸುದ್ದಿ
ಅಂಬೇಡ್ಕರ್ ಪ್ರತಿಮೆ ಶಂಕು ಸ್ಥಾಪನೆ ಹಿನ್ನೆಲೆ ಊರಿನಲ್ಲಿ ಹಬ್ಬದ ಸಂಭ್ರಮ- ರಾಜಕೀಯ ಬಂದಿಗಿಟ್ಟು ಕಾರ್ಯಕ್ರಮದಲ್ಲಿ ಭಾಗಿಯಾದ ನಾಯಕರು
![](https://www.powercity.news/wp-content/uploads/2023/08/IMG-20230822-WA0020.jpg)
ಧಾರವಾಡ
ಧಾರವಾಡ ಜಿಲ್ಲೆಯ ತಡಕೋಡ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಶಂಕುಸ್ಥಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
![](https://powercity.news/wp-content/uploads/2023/08/Screenshot_20230822_094918_Video-Player-1.jpg)
![](https://powercity.news/wp-content/uploads/2023/08/Screenshot_20230822_094918_Video-Player.jpg)
ರಸ್ತೆಗಳೆಲ್ಲಾ ಹೂವಿನಿಂದ ಅಲಂಕಾರಗೊಂಡಿದ್ದವು.
ರಾಜಕೀಯ ಮರೆತು ಎಲ್ಲಾ ನಾಯಕರು ಒಂದಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ್ರು.
ಮಾಜಿ ಸಚಿವ ಆಲ್ಕೋಡ ಹನುಂಂತಪ್ಪ, ಬಿಜೆಪಿ ನಾಯಕಿ ಸವಿತಾ ಅಮರಶೆಟ್ಟಿ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ , ತಡಕೋಡ ಗ್ರಾಮ ಪಂಚಾಯತ ಅಧ್ಯಕ್ಷ ದೊಡ್ಡಮ್ಮಕರಿಕಟ್ಟಿ ಹಾಗೂ ಉಪಾಧ್ಯಕ್ಷ ಈರಣ್ಣಾ ಬಾರಕೇರ ಸೇರಿದಂತೆ ಹಲವಾರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.