ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಅಂಗನವಾಡಿಯ ಅಂಗಳದಲ್ಲಿ ಉಪನಿರ್ದೇಶಕರ ಚೆಲ್ಲಾಟ!
Powercity news hubballi: ಧಾರವಾಡ ಜಿಲ್ಲೆಯಾದ್ಯಂತ ಕೇವಲ ಒಬ್ಬ ಅಂಗನವಾಡಿ ಕಾರ್ಯಕರ್ತೆಯನ್ನ ಮಾತ್ರ ಸ್ಥಾನಪಲ್ಲಟ ಮಾಡಿ ಆದೇಶ ಹೊರಡಿಸಿರುವ ಮಹೀಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಉಪನಿರ್ದೆಶಕರ ಕ್ರಮ ಸಾರ್ವಜನಿಕ ವಲಯದಲ್ಲಿ ನಗೆ ಪಾಟಲಿಕೆಯಾಗಿದೆ.
ಹೌದು ಇಂತಹದೊಂದು ಪ್ರಸಂಗಕ್ಕೆ ಕಾರಣವಾಗಿದ್ದು ಹುಬ್ಬಳ್ಳಿಯ ಆನಂದನಗರದ 7ನೆ ಕ್ರಾಸ್ ನಲ್ಲಿನ ಅಂಗನವಾಡಿಯೊಂದರಲ್ಲಿ ಸತತವಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ಶೈನಾಜ್ ಅಮರಗೋಳ್ ಹಾಗೂ ಬೇಪಾರಿ ಪ್ಲಾಟ್, ಅಯೋಧ್ಯನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೀತಾ ಆಡ್ಮನಿ ಎಂಬುವವರನ್ನ ಮಾತ್ರ ಸ್ಥಾನ ಪಲ್ಲಟ ಮಾಡುವ ಮೂಲಕ ಸಂಶಯಾಸ್ಪದ ನಡೆಗೆ ಕಾರಣವಾದಂತಾಗಿದೆ.
ಅಷ್ಟಕ್ಕೂ ಈಗಿರುವ ಅಂಗನವಾಡಿ ಕಾರ್ಯಕರ್ತೆಯರು ಮಾಡಿರುವ ಆಡಳಿತಾತ್ಮಕ ವಿರೋಧಿ ಚಟುವಟಿಕೆ ಯಾದರೂ ಎನು ಎಂಬುದರ ಸಂಪೂರ್ಣ ಮಾಹಿತಿಯನ್ನ ಮಹೀಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಉಪನಿರ್ದೇಶಕರೆ ಹೇಳಬೆಕಿದೆ.