VRL ಲಾರಿ ಸರ್ಕಸ್ ವಿಡಿಯೋ ವೈರಲ್.
ಹುಬ್ಬಳ್ಳಿ
ಸರಕು ಹೊತ್ತ ಲಾರಿ ಚಾಲನೆ ಮಾಡೋದು ಅಂದ್ರೆ ಅದು ಸುಲಭದ ಮಾತಲ್ಲ ಅನ್ನೋದು ಪ್ರತಿಯೊಬ್ಬ ಡ್ರೈವರ್ ಗೂ ಗೊತ್ತಿದೆ. ಆದರೆ ಇಲ್ಲೋಬ್ಬ ಡ್ರೈವರ್ ಮಹಾಷಯ ಭರ್ತಿ ಸರಕು ಹೊತ್ತು ನಿಂತ ಲಾರಿಯನ್ನ ಮುಂಭಾಗದ ಒಂದು ಚಕ್ರವೇ ಇಲ್ಲದೆ ಹಾಗೆಯೇ ಅಂದಾಜು ಮೂವತ್ತು ಕಿಲೋಮೀಟರ್ ವರೆಗೂ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಬರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಲಾರಿ ಚಾಲನೆಯ ವೈಖರಿ ನೋಡುಗರನ್ನು ದಂಗು ಬಡಿಸಿದೆ. ಸದ್ಯಕ್ಕೆ ಇ ದೃಶ್ಯ ವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು ಇದು ರಾಜ್ಯದ ಪ್ರತಿಷ್ಠಿತ ಕಂಪನಿಯಾದ V R L ಸಂಸ್ಥೆಗೆ ಸೇರಿದ್ದು ಹುಬ್ಬಳ್ಳಿಯ ಆರ್ ಟಿ ಓ ನೋಂದಣಿ ಸಂಖ್ಯೆ ಹೊಂದಿದ ಲಾರಿಯಾಗಿದೆ.
ಆದರೆ ಇ ಲಾರಿಯು ಕೊಪ್ಪಳದ ಹೊರವಲಯದಲ್ಲಿ ಮೊದಲಿಗೆ ಪಂಚರ್ ಆಗಿ ನಿಂತಿದ್ದು ಅದರ ಚಕ್ರ ಬದಲಿಸದೇನೆ ಲಾರಿಯ ವ್ಹೀಲ್ ಡ್ರಮ್ ಮೇಲೆ ಮಾತ್ರ ಚಲಾಯಿಸಿ ಕೊಂಡು ಬರುವ ದೃಶ್ಯ ನೋಡುಗರ ಎದೆ ಝಲ್ ಎನಿಸುತ್ತದೆ.
ಅದರಲ್ಲೂ ಲಾರಿ ಚಲಾವಣೆ ಮಾಡುತ್ತ ಬಂದ ವ್ಯಕ್ತಿಯ ಬಳಿ ಚಾಲನಾ ಪರವಾನಗಿಯು ಕೂಡ ಇಲ್ಲವಂತೆ. ವಿ ಆರ್ ಎಲ್ ಸಂಸ್ಥೆಯ ಡ್ರೈವರ್ ಗಳೆಂದರೆ ಅವರಲ್ಲೊಂದು ಶಿಸ್ತು ಕಂಡು ಬರುತ್ತದೆ ಆದರೆ ಕೆಲವರ ಬೇಜವಾಬ್ದಾರಿ ನಡೆಯಿಂದ ಕಂಪನಿಗೂ ಬೆಸರ ತರಿಸಬಹುದು. ಹಾಗಾದರೆ ಆ ಲಾರಿಯಲ್ಲಿ ತುಂಬಿದ್ದ ಸರಕು ಯಾವುದು? ಲಾರಿಯ ಮಾರ್ಗ ಎಲ್ಲಿಂದ ಎಲ್ಲಿಯವರೆಗೆ ಇತ್ತು? ಮುಂಭಾಗದ ಚಕ್ರ ವಿಲ್ಲದೆ ಚಲಾಯಿಸಲು ಕಾರಣವೇನು? ಯಾಕೆ ? ಎಂಬೆಲ್ಲಾ ಪ್ರಶ್ನೇ ಗಳಿಗೆ ಸಂಬಂಧ ಪಟ್ಟ ಸಂಸ್ಥೆ ಮತ್ತು ಪೊಲಿಸರ ತನಿಖೆಯಿಂದಲೆ ತಿಳಿಯಬೆಕಿದೆ