Political newsTWINCITYViral Imageಧಾರವಾಡರಾಜಕೀಯರಾಜ್ಯಸ್ಥಳೀಯ ಸುದ್ದಿ

ಒಳ ಮೀಸಲಾತಿ ನೀಡುವಂತೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಾಯ : ಉಳ್ಳಿಕಾಶಿ!

raja dakhani

power city news : hubli ಕರ್ನಾಟಕ ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯವಾಗಿ ಚರ್ಮಕಾರರಿಗೆ ಅವರ ಜನಸಂಖ್ಯೆಯ ಅನುಸಾರವಾಗಿ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಎಂದು ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ ಒತ್ತಾಯಿಸುತ್ತದೆ ಎಂದು ಮಹಾಮಂಡಳದ ಅಧ್ಯಕ್ಷರಾದ ಗುರುನಾಥ ಉಳ್ಳಿಕಾಶಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ ಚರ್ಮಕಾರರ ಸುಮಾರು ೧೫ ರಿಂದ ೧೬ ಲಕ್ಷ ಜನಸಂಖ್ಯೆ ಇರುವ ಈ ೧೮ ಕ್ಕೂ ಹೆಚ್ಚಿನ ಚಮ್ಮಾರ ಸಮಗಾರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು, ಚರ್ಮಕಾರ ಸಮುದಾಯಗಳ ಸುಮಾರು ೧೮ ಸಮುದಾಯಗಳನ್ನು ತಕ್ಷಣ ಮಾದಿಗ ಜಾತಿಗಳ ಪಟ್ಟಿಯಿಂದ ಪ್ರತ್ಯೇಕಿಸಬೇಕು, ಸಮುದಾಯದ ಸಮಗ್ರ ಏಳ್ಗೆಗಾಗಿ ಒಂದು ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಇಲ್ಲವೇ ಡಾ. ಬಾಬುಜಗಜೀವನ್ ರಾಮ್ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಕಡ್ಡಾಯವಾಗಿ ಚಮ್ಮಾರ ಸಮಗಾರ ಸಮಾಜಕ್ಕೆ ಪ್ರತ್ಯೇಕಿಸಬೇಕು, ಇಲ್ಲಿಯವರೆಗೆ ಮೂಲ ಚರ್ಮಕಾರ ಜಾತಿಗಳು ಸೇರಿದಂತೆ ಸಮಸ್ತ ಪರಿಶಿಷ್ಟ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ಮತ್ತು ವಾಸ್ತವಿಕ ಸ್ಥಿತಿಗಳ ಅವಲೋಕನ ಮಾಡಬೇಕು. ನಮ್ಮ ಸಮುದಾಯಗಳ ಜನಸಂಖ್ಯೆ, ಹಿಂದುಳಿದಿರುವಿಕೆ ಮತ್ತು ಸಮಸ್ಯೆಗಳನ್ನು ಪರಿಗಣಿಸಿ ಸರ್ಕಾರವು ಯೋಜನೆ ಮತ್ತು ಕಾರ್ಯಕ್ರಮ ಅನುದಾನ ಮಾಡಬೇಕು ಸೇರಿದಂತೆ ವಿವಿಧ ಸರ್ಕಾರ ಈಡೇರಿಸಬೇಕು
ಮಾದಿಗ ಸಂಬಂಧಿತ ಜಾತಿಗಳ ಪಟ್ಟಿಯಿಂದ ಚರ್ಮಕಾರ ಸಮುದಾಯಗಳನ್ನು ನಿಸ್ಸಂಕೋಚವಾಗಿ ಬೇರ್ಪಡಿಸಿ ಚರ್ಮಕಾರ ಸಮುದಾಯದ ಅಭಿವೃದ್ಧಿ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಈ ಮೂಲಕ ಬೇಡಿಕೆಗೆ ಆಗ್ರಹಿಸಿ ಹೋರಾಟ ಇಂದಿನಿಂದ ತೀವ್ರಗೊಳಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಪರಶುರಾಮ ಅರಕೇರಿ, ಭೀಮಪ್ಪ ತೇರದಾಳ, ವಸಂತ ಬೆಟಗೇರಿ, ಭೀಮಪ್ಪ ತೇರದಾಳ, ಪ್ರಭು ಅಣ್ಣಿಗೇರಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *