ಮದುವೆಗೆ ಮುಂಚೆಯೇ ಹೆಣವಾದ ಮದುಮಗ

ಧಾರವಾಡ
ಆತ ಜೀವನದಲ್ಲಿ ಬಾಳಿ ಬದುಕಬೇಕಾದ ಯುವಕ. ಭವಿಷ್ಯದಲ್ಲಿ ಹಲವಾರು ಕನಸುಗಳನ್ನು ಕಂಡಾತ.

ಆದ್ರೆ ವಿಧಿಯಾಟವೆಬಂತೆ ಮದುವೆ ದಿನ ಗುರುವಾರ ಹಸೆಮಣೆಗೆ ಏರಬೇಕಿದ್ದ ವರ ರಾಘವೇಂದ್ರ ಶಿಂಧೋಗಿ ಮದುವೆಗೂ ಮುಂಚೆಯೇ ಇನ್ನೊಬ್ಬರ ಹೊಲದಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಆತನ ಮೃತದೇಹದ ಬಳಿ ಕ್ರೀಮಿನಾಶಕ ಬಿದ್ದಿದ್ದು, ಇದು ಆತ್ಮಹತ್ಯೆ ಎಂದು ಮೇಲನೋಟಕ್ಕೆ ಕಂಡು ಬಂದಿತ್ತು.

ಆದ್ರೆ ಊರಿನ ಹಿರಿಯರು ಇದೊಂದು ವ್ಯವಸ್ಥಿತ ಷಡ್ಯಂತ್ರದ ಸಾವಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಧಾರವಾಡ ತಾಲೂಕಿನ ಕಬ್ಬೆನೂರು ಗ್ರಾಮದ ರಾಘವೇಂದ್ರ ಶಿಂಧೋಗಿ ಈತನ ವಿವಾಹ ಕಲಘಟಗಿ ತಾಲೂಕಿನ ಯುವತಿಯೊಂದಿಗೆ ನಿಶ್ಚಯವಾಗಿತ್ತು.

ಆದ್ರೆ ಮದುವೆಗೂ ಮುಂಚೆ ಮದುವೆ ಆಮಂತ್ರಣ ಹಂಚಿದ್ದ ಮದುಮಗ ಏಕಾಏಕಿ ಸಾವನ್ನಪ್ಪಿದ್ದು, ಹಲವರಲ್ಲಿ ಸಂಶಯ ಮೂಡಿಸಿದೆ.

ಈ ಬಗ್ಗೆ ಕುಲಕೂಂಶವಾಗಿ ತನಿಖೆ ನಡೆದು ಸಾವಿನ ರಹಸ್ಯ ಬಯಲು ಮಾಡಬೇಕೆಂದು ಊರಿನ ಪ್ರಮುಖರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪವರ್ ಸಿಟಿ ನ್ಯೂಸ್ ಕನ್ನಡ ಇದು ಸತ್ಯ ಸದಾಕಾಲ