
POWER CITY NEWS : HUBBALLIಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ತಹಶೀಲ್ದಾರ್ ಪ್ರಕಾಶ್ ಗಾಯಕ್ವಾಡ್ ಅವರಿಗೆ ಸೇರಿದ್ದ ಆರು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ತನಿಖೆ ನಡೆಸಿದ ಬಳಿಕ ಅವರನ್ನು ಅಮಾನತ್ತು ಮಾಡಿ ಅದೇಶ ಹೋರಡಿಸಲಾಗಿದೆ.
ಜನವರಿ 8ರಂದು ಬೆಳಗಾವಿಯಲ್ಲಿರುವ ಅವರ ನಿವಾಸ ಸೇರಿದಂತೆ ನಿಪ್ಪಾಣಿ, ಅಂಕೋಲ ಮತ್ತು ಖಾನಾಪುರದ ಆರು ಸ್ಥಳಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲೆಕ್ಕವಿಲ್ಲದ ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.
ತಹಸಿಲ್ದಾರ್ ಪ್ರಕಾಶ್ ಗಾಯಕ್ವಾಡ್ ತಮ್ಮ ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬುದು ಸ್ಪಷ್ಟವಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಗಾಯಕ್ವಾಡ್ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಅವರು ಅನೇಕ ಸ್ಥಳಗಳಲ್ಲಿ ಅಕ್ರಮವಾಗಿ ಆಸ್ತಿಗಳನ್ನು ಖರೀದಿಸಿದ್ದರು. ಖಾನಾಪುರ ತಾಲೂಕಿನ ಹಲವೆಡೆ ಜನರನ್ನು ಬೆದರಿಸಿ ಭೂಮಿ ಖರೀದಿಸಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ದೂರುಗಳು ದಾಖಲಾಗಿದ್ದವು.ಇ ಹಿನ್ನೆಲೆಯನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಂಡಿದ್ದರು. ಕಳೆದ ಒಂದು ತಿಂಗಳಿನಿಂದ ಅವರ ಆಸ್ತಿಗಳ ತನಿಖೆ ನಡೆಯುತ್ತಿದೆ. ಅದಾದ ನಂತರ, ಇಂದು ಅವರನ್ನು ಅಮಾನತುಗೊಳಿಸಲಾಗಿದೆ.