Hubballi

ಕಿತ್ತೇಸೆದ ಪೋಲಿಸ್ ಇಲಾಖೆ: ಪಿಸಿ ಬಸವರಾಜ್ ಮನ್ನೂರ ಸಸ್ಪೆಂಡ!

POWERCITY NEWS: HUBBALLI

ಹುಬ್ಬಳ್ಳಿ:
ಠಾಣಾಧಿಕಾರಿಗಳ ವಾಹನದ ಎದುರು ನಿಂತು ಅಶ್ಲೀಲ ಪದಗಳ ರೀಲ್ಸ್ ಮಾಡಿದ್ದರು ಎನ್ನಲಾದ ಇಲ್ಲಿನ ಕಸಬಾ ಪೇಟೆ ಪೊಲೀಸ್ ಸಿಬ್ಬಂದಿಯ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ವಾಗಿತ್ತು. ಪೊಲಿಸಪ್ಪನ ಅಶಿಸ್ತು ನಡೆಯ ಕುರಿತು “ಇಲಾಖೆಯ ಮಾನ ಹಾರಿ ಬಿಟ್ಯಲ್ಲೋ ಮುಟ್ಠಾಳ” ಎನ್ನುವ ಶಿರ್ಸಿಕೆಯಡಿ ವರದಿಯನ್ನು ನಿಮ್ಮ ಪವರ್ ಸಿಟಿ ನ್ಯೂಸ್ ಸುದ್ದಿ ಪ್ರಕಟಿಸಿತ್ತು. ವರದಿ ಬಿತ್ತರಿಸಿದ ನಂತರ ಅವಳಿ ನಗರದ ಪೊಲೀಸ್ ಆಯುಕ್ತರು ತಕ್ಷಣವೆ ಕೃತ್ಯಕ್ಕೆ ಸಂಬಂದಪಟ್ಟ ಸಿಬ್ಬಂದಿಯನ್ನು ಅಮಾನತು ಗೊಳಿಸಿಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿಯ ಕಸಬಾಪೇಟೆ ಸಿಬ್ಬಂದಿ ಬಸವರಾಜ್ ಮಣ್ಣೂರ ಅಮಾನತ್ತು ಗೊಳಿಸಿ ಹುಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಅಧಿಕಾರಿಯ ವಾಹನದ ಮುಂದೆ ನಿಂತು ಅಶ್ಲೀಲ ಪದ ಬಳಸಿ ರೀಲ್ಸ್ ಮಾಡಿದ್ದ ಬಸವರಾಜ್ ಮಣ್ಣೂರ
ರೀಲ್ಸ್ ಮಾಡಿ ಪೊಲೀಸ್ ವಾಹನದ ಮುಂದೆ ಬಿಲ್ಡಪ್ ಕೊಟ್ಟಿದ್ದ ಬಸು ಮಣ್ಣೂರ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದಲ್ಲದೆ ಆಸ್ತಿ ಲಪಾಟಿಯಿಸಿದ ಆರೋಪವು ಬಸವರಾಜ್ ಮಣ್ಣೂರ ಮೇಲೆ ಕೇಳಿಬಂದಿದ್ದು ಪ್ರಕರಣ ತನಿಖೆಯಲ್ಲಿದೆ
ಹೀಗಾಗಿ ಬಸವರಾಜ್ ಮಣ್ಣೂರನನ್ನು ಇದೀಗ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿ ಕಾನೂನು ಎಲ್ಲರಿಗೂ ಒಂದೆ ಎನ್ನುವುದನ್ನು ತೊರಿಸಿಕೊಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *