POWERCITY NEWS: KOPPAL
ಕೊಪ್ಪಳ /ಕುಷ್ಟಗಿ : ಅತಿಥಿ ಉಪನ್ಯಾಸಕರು ಇಲ್ಲದೆ ಕಾಲೇಜಿನಲ್ಲಿ ನಡೆಯಬೆಕಿದ್ದ ತರಗತಿಗಳು ಅಸ್ತವ್ಯಸ್ಥ ಗೊಂಡ ಘಟನೆ ಕುಷ್ಟಗಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.ಇಲ್ಲಿನ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಬೇಕು ಮತ್ತು ಸಂಬಳ ಹೆಚ್ಚು ಮಾಡಬೇಕು ಎಂದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಓದಿನ ಹೊರೆ ವಿದ್ಯಾರ್ಥಿಗಳಿಗೆ ಬಿದ್ದಿದೆ. ಇದರಿಂದ ಹತಾಶ ಗೊಂಡ ಕುಷ್ಟಗಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಧ್ಯಾರ್ಥಿಗಳು ಏಕಾ ಏಕಿ ಬುಧವಾರ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದರೆ ತರಗತಿಗಳು ನಡೆಯದಿರುವುದನ್ನು ಖಂಡಿಸಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು
ಗ್ರೇಡ್ ’2′ ತಾಸಿಲ್ದಾರ್ ಮುರಳಿಧರ್ ಮುಕ್ತೆಧಾರ ರವರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿ ರಮೇಶ್ ಮಾತನಾಡಿ ಬಹಳಷ್ಟು ದಿನಗಳಿಂದಲೂ ತರಗತಿಗಳನ್ನು ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದಾರೆ. ಇದರಿಂದಾಗಿ ನಾವು ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.