ಬಂದ್‌ಗೆ ಕೆಲ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಡೋಂಟ್ ಕೇರ್!
SATHISH JADIMATH
POWER CITY NEWS : HUBBALLI ಬಂದ್ ಗೆ ಡೋಂಟ್ ಕೇರ್, ಮದ್ಯದ ವ್ಯಾಪಾರ ಬಲು ಜೋರ್
ಸಂವಿಧಾನ ಶಿಲ್ಪಿ ಡಾ:ಬಿ.ಆರ್ ಅಂಬೇಡ್ಕರ್ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ ಬಿಜೆಪಿ ಮುಖಂಡ ಅಮಿತ್ ಶಾ ವಿರುದ್ದ ದೇಶದ ನಾನಾ ಕಡೆ ಆಕ್ರೋಶದ ಬೆಂಕಿ ಹತ್ತಿ ಉರಿಯುತ್ತಿದ್ದು, ಇಂದು ಧಾರವಾಡ ಜಿಲ್ಲಾದ್ಯಂತ ಬಂದ್ ಗೆ ಕೆಲ ಸಂಘಟನೆಗಳು ಕರೆ ನೀಡಿದೆ. ಇದಕ್ಕೆ ಹಲವು ವ್ಯಾಪಾರಸ್ಥರು, ಶಾಲಾ ಕಾಲೇಜುಗಳು, ಸಣ್ಣ ಕೈಗಾರಿಕೆಗಳು ಸೇರಿದಂತೆ ಹಲವರು ಜನರು ಬೆಂಬಲ ನೀಡಿದ್ದಾರೆ. ಆದ್ರೆ ಇದಕ್ಕೆ ವಿರುದ್ದವಾಗಿ ಕೆಲವರು ಅಂಗಡಿಗಳನ್ನು ತೆರೆದು ಬಂದ್ ಗೆ ವಿರೋಧ ವ್ಯಕ್ತಪಡಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಅದರಲ್ಲೂ ನಗರದ ಭೈರಿದೇವರಕೊಪ್ಪ ಬಳಿ, ಹಾಗೂ ಹು- ಧಾ ಮುಖ್ಯ ರಸ್ತೆಯಲ್ಲಿರುವ MRP ಸೆಂಟರ್ ಮಂಜು ವೈನ್ ಶಾಪ್ ಇಂದು ಸಹ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಬಾರ್ ಮಾಲೀಕರ ನಡೆಯಿಂದ ಹಲವು ಸಂಘಟನೆಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಅಂಬೇಡ್ಕರ್ ರವರಿಗೆ ಅವಮಾನ ಮಾಡುವ ನಿಟ್ಟಿನಲ್ಲಿ ತೆರೆದಿರುವ ಬಾರ್ ವಿರುದ್ದ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.…