ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: ಎರಡು ಲಾರಿ ಒಂದು ಟ್ರ್ಯಾಕ್ಟರ್ ವಶಕ್ಕೆ!
ಹುಬ್ಬಳ್ಳಿ
ಮರಳು ದಂಧೆಯ ವಿರುದ್ಧ ಎಚ್ಚೆತ್ತ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ.
ಅವಳಿನಗರದಲ್ಲಿ ತಮ್ಮದೆ ಆದ ಅಕ್ರಮ ನಿಯಮಗಳನ್ನ ಹೊಂದಿದ್ದ ಮರಳು ದಂಧೆಕೊರರಿಗೆ ಇಂದು ಮೈನ್ಸ್ ಅ್ಯಂಡ್ ಜಿಯೊಲಜಿ ಅಧಿಕಾರಿಯಾದ ತೆಜಸ್ವಿನಿ ಮತ್ತು ತಂಡ ಬಿಸಿ ಮುಟ್ಟಿಸಿದ್ದಾರೆ.
ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಲ್ಲಿ ಅವಳಿನಗರದಲ್ಲಿ ಅಕ್ರಮ ಮರಳು ಸಾಗಣಿಕೆ ದಂಧೆ ನಡೆಸುತ್ತಿದ್ದ ಎರಡು ಲಾರಿ ಹಾಗೂ ಟ್ರ್ಯಾಕ್ಟರ್ ಗಳನ್ನ ವಶಕ್ಕೆ ಪಡೆಯುವ ಮೂಲಕ ಕರ್ತವ್ಯ ಮೆರೆದಿದ್ದಾರೆ.
ಅವಳಿನಗರದಲ್ಲಿ ಇನ್ನೂ ಇಂತಹ ಅಕ್ರಮ ಮರಳು ಅಡ್ಡೆಗಳಿದ್ದು ಸರಿಯಾದ ಸಮಯಕ್ಕೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಪವರ್ ಸಿಟಿ ನ್ಯೂಸ್ ಗೆ ತಿಳಿಸಿದ್ದಾರೆ.
ಇಂದು ನಡೆಸಿದ ದಾಳಿಯಲ್ಲಿ ಮರಳು ತುಂಬಿದ್ದ ಎರಡು ಟ್ರಕ್ ಹಾಗೂ ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆದು ಹಳೆಹುಬ್ಬಳ್ಳಿಯ ಪೊಲಿಸ್ ಠಾಣೆಗೆ ಮಾಹಿತಿನಿಡಿದ್ದಾರೆ.
ದಾಳಿ ನಡೆಸಿದ ವೇಳೆ ಮಹೀಳಾ ಅಧಿಕಾರಿಗಳು ದೂರವಾಣಿ ಮೂಲಕ ಠಾಣೆಗೆ ವಿಷಯ ತಿಳಿಸಿದ್ದಾರೆ ಆದ್ರೆ ಸ್ಥಳಕ್ಕೆ ಧಾವಿಸಲು ನಮ್ಮಲ್ಲಿ ವಾಹನವಿಲ್ಲ ಎಂದಾಗ ಮೈನ್ಸ್ ಅ್ಯಂಡ್ ಜಿಯೊಲಜಿ ಅಧಿಕಾರಿಗಳ ವಾಹನ ವನ್ನೆ ಠಾಣೆಗೆ ಕಳಿಸಿ ಪೊಲಿಸ್ ಸಿಬ್ಬಂದಿಯನ್ನು ಕರೆಯಿಸಿಕೊಂಡಿದ್ದಾರೆ. ಹಾಗಾದ್ರೆ ಹಳೆಹುಬ್ಬಳ್ಳಿಯ ಪೊಲಿಸರ ಬಳಿ ವಾಹನಗಳೆ ಇಲ್ಲವೆ ಎನ್ನುವ ಪ್ರಶ್ನೆ ಇದೀಗ ಉದ್ಭವ ವಾಗಿದೆ.