POWER CITYNEWS NEWS : HUBBALLI
ಹುಬ್ಬಳ್ಳಿ :
ಶ್ರೀ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾನದ ೫ ನೇ ವಾರ್ಷಿಕೋತ್ಸವದ ಹಾಗೂ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಡೆವಲಪ್ಮೆಂಟ್ ಟ್ರಸ್ಟ್ ೨೦ ನೇ ವಾರ್ಷಿಕೋತ್ಸವ, ಡಾ. ಶರಣಪ್ಪ ಎಮ್. ಕೊಟಗಿ ಚಾರಿಟೇಬಲ್ ಟ್ರಸ್ಟ್ ನ ೭ ನೇ ವಾರ್ಷಿಕೋತ್ಸವದ ಅಂಗವಾಗಿ ಸಮುತ್ಸವ-೨೦೨೪ ಕಾರ್ಯಕ್ರಮವನ್ನು ಫೆ.೫ ರಂದು ಬೆ. ೧೦ ಗಂಟೆಗೆ ಧಾರವಾಡ ಸತ್ತೂರಿನ ಶ್ರೀ ಬಸವೇಶ್ವರ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ & ಡೆವಲಪ್ಮೆಂಟ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ಶರಣಪ್ಪ ಕೊಟಗಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಧಾರವಾಡದ ಮುರಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಪೀಠದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಮಹಾ ಸಂಸ್ಥಾನದ ವಂಶಸ್ಥರಾದ ಲಿಂಗರಾಜ ಅಪ್ಪಾ ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ವಿ.ಪ.ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಕೆಪಿಸಿಸಿ ನಿವೃತ್ತ ಸೈನಿಕ ವಿಭಾಗದ ಅಧ್ಯಕ್ಷರಾದ ಮಲ್ಲಿಕಾರ್ಜುನ ತಿಮ್ಮಲಾಪೂರ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆ ಎಂದರು.
ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಡಾ. ಶರಣಪ್ಪ ಕೊಟಗಿ ವಹಿಸಲಿದ್ದು, ಡಾ. ಪ್ರಶಾಂತ ರಾಮನಗೌಡರ, ಸುಬ್ಬರಾಯ ಖಾದ್ರಿ ಉಪಸ್ಥಿತಿ ಇರಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ಮೃತ್ಯುಂಜಯ ಕೊಟಗಿ, ನಾಗರಾಜ್ ಕೊಟಗಿ, ವಿ.ಜಿ.ಪಾಟೀಲ್, ಡಾ. ಮಹಾಂತೇಶ್ ಹಿರೇಮಠ, ನವೀನ್ ಕರೇರ್ ಉಪಸ್ಥಿತರಿದ್ದರು.