ಗ್ರಾಮೀಣ ಪೊಲೀಸರಿಂದ ಕೊಲೆಗೆಡುಕರ ಸೆರೆ : ಎಸ್ಪಿ ಬ್ಯಾಕೋಡ್!
SP GOPALAKRISHN BYAKODI
POWER CITYNEWS : HUBLI
ಹುಬ್ಬಳ್ಳಿ: ಅವಳಿನಗರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು ಒಂದೆಡೆಯಾದರೆ. ಈತ್ತ ಎನಾದ್ರೂ ಮಾಡಿ ದಿಢೀರ್ ಹಣ ಮಾಡಬೇಕು ಬಯಸಿದ್ದನ್ನೇಲ್ಲಾ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಕೆಲ ಯುವಕರು ಅಕ್ರಮ ಬಡ್ಡಿ ದಂಧೆಗೆ ಕೈಹಾಕಿರುವುದು ಕೂಡ ಅಷ್ಟೇ ಸತ್ಯವಾಗಿದೆ.
ಹೀಗೆ ಬಡ್ಡಿ ಹಣ ನೀಡಿ ಬಡ್ಡಿ ಪಡೆಯುತ್ತಲೆ ಬರ್ಬರ ಹತ್ಯೆಗಿಡಾದ ಘಟನೆ ಧಾರವಾಢ ಗ್ರಾಮಿಣ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.ಹೆಬ್ಬಳ್ಳಿ ರಸ್ತೆಯ ಗೋವನಕೊಪ್ಪದ ಸಮೀಪದ ಹೊಲದ ಬದುವಿನಲ್ಲಿ ಹೆಣವಾಗಿ ಬಿದ್ದಿದ್ದ ಧಾರವಾಡ ಮೂಲದ ಹರೀಷ ಸಿಂಧೆ ಎಂಬ 27ರ ಯುವಕ ಎನ್ನಲಾಗಿತ್ತು.
ಆದ್ರೆ ಹರಿಷನನ್ನು ನಂಬಿಸಿ ಕರೆದೊಯ್ದ ಪಾತಕಿಗಳ ತಂಡ ಕಳೆದ 23/7/2024ರಂದು ಆಯುಧ ಹಾಗೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಸ್ಥಳದಿಂದ ಚಾಣಾಕ್ಷತನದಿಂದ ತಲೆಮರೆಸಿಕೊಂಡಿದ್ದ ಕೊಲೆ ಪಾತಕಿಗಳ ಪೈಕಿ ಇಬ್ಬರಾದ ಸರ್ಫರಾಜ್ ಮತ್ತು ಸಾಹೀಲ್ ಎನ್ನುವವರನ್ನ ವಶಕ್ಕೆ ಪಡೆದು ಅವರಿಂದ ಕೃತ್ಯಕ್ಕೆ ಬಳಸಿದ ,ಮಚ್ಚು,ಬೈಕ್,ಹಾಗೂ ಮೋಬೈಲಗಳ ಸಮೇತವಾಗಿ ಧಾರವಾಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಕೃಷ್ಣ ಬ್ಯಾಕೋಡ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಇನ್ಸ್‌ಪೆಕ್ಟರ್ ಶಿವಾನಂದ ಕಮತಗಿ ತಂಡ ಇಂದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವ ಮೂಲಕ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಹಲವು ಪಾತಕಿಗಳಿಗೆ ಶೋಧ ಮುಂದುವರೆಸಲಾಗಿದೆ.
ಇನ್ನೂ ಘಟನೆ ಧಾರವಾಢ ಜಿಲ್ಲೆಯಾದ್ಯಂತ ನಡೆಯುತ್ತಿರು ಅಕ್ರಮ ಬಡ್ಡಿ ದಂಧೆ ಅಷ್ಟೇ ಅಲ್ಲದೆ ಗ್ರಾಮಿಣ ಪ್ರದೇಶಗಳಲ್ಲಿ ನಡೆಯುತ್ತಿವೆ ಎನ್ನಲಾದ ಅಕ್ರಮ ಇಸ್ಪಿಟ್ ಅಡ್ಡಾಗಳಲ್ಲಿ ಕಾನೂನು ಭಯವೆ ಇಲ್ಲದೆ ಮೀಟರ್ ಲೆಕ್ಕದಲ್ಲಿ ಫೈನಾನ್ಸ್ ನೀಡಿ ನಂತರ ವಸೂಲಿಗೆ ನಿಲ್ಲುತ್ತ ಕಿರುಕುಳ ನೀಡುತ್ತಿರುವ ಘಟನೆಗಳು ನಗರ ಹಾಗೂ ಗ್ರಾಮಿಣ ಪ್ರದೇಶಗಳಲ್ಲಿ ಜೋರಾಗಿಯೆ ನಡೆಯುತ್ತಿವೆ. ಇದರ ಬಗ್ಗೆ ಪೊಲೀಸರು ಕೂಡ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ.