BREAKING NEWSCITY CRIME NEWSDAVANGEREPolicePolitical newsProtest

ಪಾಲಿಕೆ ದ್ವಾರಬಾಗಿಲಲ್ಲೇ ತ್ಯಾಜ್ಯ ಸುರಿದು ಪ್ರತಿಭಟನೆ!

HDMC

POWER CITYNEWS : HUBLI

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಗುತ್ತಿಗೆ ಪೌರಕಾರ್ಮಿಕರು ಇಂದು ಕಚೇರಿ ಆರಂಭದ ಸಮಯದಲ್ಲಿ ಪಾಲಿಕೆಯ ಪ್ರಮುಖ ಪ್ರವೇಶ ದ್ವಾರದಲ್ಲೇ ನಗರದ ಎಲ್ಲ ತ್ಯಾಜ್ಯ ಸುರಿದು ನೂತನವಾಗಿ ಪ್ರತಿಭಟನೆ ನಡೆಸಿದರು.ಇದರಿಂದ ವಿವಿಧ ಕೆಲಸಕ್ಕೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಕರ್ತವ್ಯಕ್ಕೆ ಹಾಜರಾಗುವ ಪಾಲಿಕೆ ಅಧಿಕಾರಿಗಳು ತ್ಯಾಜ್ಯದಿಂದ ಬರುತ್ತಿದ್ದ ದುರ್ವಾಸನೆಯಿಂದ ಪಾಲಿಕೆ ಪ್ರವೇಶಿಸಲಾಗದೆ ದೂರವೆ ನಿಲ್ಲುವಂತೆ ಮಾಡಿತ್ತು.

ಕಳೆದ ಎಂಟು ದಿನಗಳಿಂದ ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಾಲಿಕೆ ಕಚೇರಿ ಮುಂಭಾಗದಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ನೇರವೇತನ ಪಾವತಿ ಅಡಿಯಲ್ಲಿ ತರಬೇಕು.
ಪೌರ ಕಾರ್ಮಿಕರ ಸಂಘಕ್ಕೆ ಪಾಲಿಕೆ ಆವರಣದಲ್ಲಿ ಕೊಠಡಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದರು. ನಿತ್ಯ ಒಂದಲ್ಲಾ ಒಂದು ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಪೌರಕಾರ್ಮಿಕರು ಇಂದು ಕೂಡ ಕಚೇರಿ ಆರಂಭದ ವೇಳೆಯಲ್ಲಿ ನಗರದಲ್ಲಿ ಸಂಗ್ರಹಿಸಿದ್ದ ಎಲ್ಲ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲಕ ತಂದು ಮುಖ್ಯ ದ್ವಾರದಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರಿದ್ದು ಇಲ್ದಂಗಾಯ್ತು!

ಹೌದು.. ಮುನ್ನೆಚ್ಚರಿಕಾ ಕ್ರಮವಾಗಿ ನಿಯೋಜಿಸಿದ್ದ ಪೊಲೀಸರು ಮಳೆಯ ಕಾರಣ ಪಾಲಿಕೆಯಿಂದ ಅಣತಿ ದೂರದಲ್ಲಿ ಇದ್ದರು ಎನ್ನಲಾಗಿದೆ.ಕಸ ಅಹಿತಕರ ಘಟನೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಮುಂದಾದರೂ ಕೂಡ ಕ್ಷಣಾರ್ಧದಲ್ಲಿ ಟ್ರ್ಯಾಕ್ಟರ್ ಡ್ರೈವರ್ ಆವರದಲ್ಲೇ ಕಸ ಸುರಿದ ಘಟನೆ ನಡೆಯಿತು.ಕಸ ಸುರಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳು ಕೂಡಲೇ ಖಾಯಂ ಪೌರ ಕಾರ್ಮಿಕರನ್ನು ಕರೆಯಿಸಿ ತರಾತುರಿಯಲ್ಲಿ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾದರು. ನಂತರ ಜೆಸಿಬಿ ಮೂಲಕ ಕಸ ತುಂಬಿಸಿ ಜಟ್ಟಿಂಗ್ ಯಂತ್ರದ ಮೂಲಕ ನೀರಿನಿಂದ ಸ್ವಚ್ಛಗೊಳಿಸಿದರು.ಇಂತಹ ಘಟನೆಗೆ ಹಾಗೂ ಮುಜುಗರಕ್ಕೆ ಕಾರಣವಾದ ಟ್ರ್ಯಾಕ್ಟರ್ ಹಾಗೂ ಡ್ರೈವರ್ ಟೆಂಡರ್ ರದ್ದು ಮಾಡುವ ಕುರಿತು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಇತರೆ ಕಾರಣಗಳ ಮೇಲೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಸಲಾಗುತ್ತಿದೆ. ಟ್ರ್ಯಾಕ್ಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *