ಕಂದಾಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ!
Annigeri
POWERCITY NEWS : HUBLI
ಅಣ್ಣಿಗೇರಿ : ಅಣ್ಣಿಗೇರಿ ತಾಲೂಕಿನ ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿರುವುದಾಗಿ ಆರೋಪ ಕೇಳಿಬಂದಿದೆ.
ರಾತ್ರಿ ವೇಳೆ ಊಟಕ್ಕೆಂದು ಅಂಬಿಗೇರಿ ಕ್ರಾಸ್ ಬಳಿಯ ಧಾಭಾ ಒಂದರಲ್ಲಿ ಹೋಗಿದ್ದ ಕಂದಾಯ ಇಲಾಖೆಯ ಸಬ್ಬಂದಿ ರಿಷಿ ಸಾರಂಗಿ ಎಂಬುವವರು ಧಾಭಾದ ಎದುರು ನಿಂತಿದ್ದ ಬೈಕ್ ಮೇಲೆ ನೀರಿನ ಬಾಟಲ್ ಇಟ್ಟು ಸ್ನೇಹಿತನ ಜೋತೆ ಮಾತನಾಡುತ್ತಿರುವ ವೇಳೆಯಲ್ಲಿ ಊಟ ಮುಗಿಸಿ ಹೊರಬಂದ ಅಣ್ಣಿಗೇರಿ ಪೊಲಿಸ್ ಠಾಣೆಯ ಮಂಜುನಾಥ ನಾಗಾವಿ ಹಾಗೂ ವಿಕಾಸ ನಾಯಕ ಎಂಬ ಹೆಸರಿನ ಪೊಲೀಸ್ ಸಿಬ್ಬಂದಿಗಳು ನೀರಿನ ಬಾಟಲಿ ಇರಿಸಿದ್ದನ್ನು ಕಂಡು ರಿಷಿಯವರನ್ನ ಅವ್ಯಾಚ್ಯ ವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಘಟನೆ 15/11/2023ರ ತಡ ರಾತ್ರಿ ನಡೆದಿದ್ದು ಹಲ್ಲೆ ನಡೆಸುತ್ತ ಅಣ್ಣಿಗೇರಿ ಯಲ್ಲಿ ಕರ್ತವ್ಯದ ಹೆಸರಲ್ಲಿ ದಬ್ಬಾಳಿಕೆನಡೆಸುತ್ತಿರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಹಾಗೂ ಅಣ್ಣಿಗೇರಿ ಕಚೇರಿಯ ಸಿಬ್ಬಂದಿಯ ಮೇಲಿನ ದಾಳಿ ಖಂಡಿಸಿ ಸಾರ್ವಜನಿಕರು ಠಾಣೆಗೆ ಭೇಟಿನಿಡಿ ಠಾಣಾಧಿಕಾರಿಗಳಿಗೆ ಲಿಖಿತ ಅರ್ಜಿ ನೀಡುವ ಮೂಲಕ ಒತ್ತಾಯಿಸಿದ್ದಾರೆ.