POWER CITYNEWS : HUBLI
ಸಾರ್ವಜನಿಕರ ಅನುಕೂಲಕ್ಕೆಂದು ಹಾಗೂ ಸಮಾಜಘಾತಕರಿಗೆ ಭಯವಿರಲಿ ಎಂಬ ಉದ್ದೇಶಕ್ಕಾಗಿ ಲಕ್ಷಾಂತರ ಜನರು ಬೇಟಿ ನೀಡುವ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಔಟ್ ಪೋಸ್ಟ್ ತೆರದು ವರ್ಷಗಳೇ ಕಳೆದಿವೆ.
ಇತ್ತ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿರಲಿ ಎನ್ನುವ ಉದ್ದೇಶದಿಂದ ಸಾಕಷ್ಟು ಬದಲಾವಣೆಗಳನ್ನು ಸಹ ಗೃಹ ಇಲಾಖೆ ಅಭಿವೃದ್ಧಿ ಕಲ್ಪಿಸಿಕೊಟ್ಟಿದೆ. ಆದ್ರೆ ಅವಳಿನಗರದ ಕೆಲವು ಪೊಲಿಸ್ ಠಾಣೆಗಳ ಪೈಕಿ ಇಲ್ಲಿನ ಹಳೆಹುಬ್ಬಳ್ಳಿ ಪೊಲೀಸ್ ಠಾಣೆ ಇದರ ಹೊರತಾಗಿದಿಯಾ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದು ಕಾಡಲಾರಂಬಿಸಿದೆ. ಎಕೆಂದ್ರೆ ಹಳೆ ಹುಬ್ಬಳ್ಳಿಯ ಸೂಕ್ಷ್ಮ ಪ್ರದೇಶಗಳಲ್ಲೊಂದಾದ ಆನಂದನಗರಕ್ಕೆ ಬಹುದಿನಗಳಿಂದಲೂ ಪೊಲೀಸ್ ಚೌಕಿಯ ಅವಶ್ಯಕತೆ ಇತ್ತೂ ಎನ್ನಲಾಗಿದೆ. ಆದ್ರೆ ಇದೀಗ ಕಳೆದ ಐದಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿದ್ದಾರೂಢರ ಅಂಗಳದಲ್ಲಿಯೇ ನಿರ್ಮಾಣ ಮಾಡಿರುವ ಪೊಲೀಸ್ ಹೊರ ಠಾಣೆಯೆ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಸುವಂತೆ ಮಾಡಿದೆ. ಮಠಕ್ಕೆ ಇ ದಿನನಿತ್ಯ ಪೂಜೆ,ಪುನಃಸ್ಕಾರ ಎಂದು ನೆಮ್ಮದಿ ಕಾಣಲು ಬರುವ ಭಕ್ತರ ಕಣ್ಣಿಗೆ ಬಿಳೋದೆ ಈ ಪೊಲಿಸ್ ಹೊರಠಾಣೆ. ಇಲ್ಲಿ ದಿನನಿತ್ಯ ಹಲವಾರು ಸಮಸ್ಯೆಗಳನ್ನು ಪರಿಹರಸಲೋ ಅಥವಾ ಇನ್ಯಾವುದೋ ತನಿಖೆಗೆಂದೋ ಕರೆತರುವ ಆರೋಪಿತರ ಕುಟುಂಬಗಳ ಗೋಳಾಟ ಹೇಳತೀರದಾಗಿರುತ್ತದೆ ಇದರಿಂದ ಮಠಕ್ಕೆ ಭೇಟಿ ನೀಡುವ ಭಕ್ತರಿಗೂ ಇನ್ನಿಲ್ಲದ ಕಿರಿಕಿರಿ.
ಅದ್ರಲ್ಲೂ ಇಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಕಾರ್ಯವೈಖರಿಯಂತೂ ಹೇಳತಿರದು.. ಒಬ್ಬೊಬ್ಬ ಸಿಬ್ಬಂದಿಗೂ ಒಬ್ಬೋಬ್ಬ ಅಸಿಸ್ಟೆಂಟ್‌ಗಳು ಇವರ ಕೆಲಸ ಮಾತ್ರ ಇವರಿಗೆ ಬಕೇಟ್ ಹಿಡಿಯೋದು ಹೇಳಿದ್ದನ್ನ ಮಾಡೋದು.
ಆರೋಪ ಯಾವುದೇ ಇರಲಿ ಕೇಳಿದಷ್ಟು ಕೊಟ್ರೆ ಓಕೆ ಇಲ್ದಿದ್ರೆ ಘಟನೆ ಯಾವುದೆ ಪೊಲೀಸ್ ಠಾಣೆಯ ವ್ಯಾಪ್ತಿಯಾದ್ದಾಗಲಿ, ವ್ಯಕ್ತಿ ಯಾರೆ ಆಗಿರಲಿ ಕೇಸ್ ಫೀಕ್ಸ್. ಇದೆ ರೀತಿ ಇಲ್ಲೀನ ಪೊಲೀಸ್ ಹೊರಠಾಣೆ ಸಿಬ್ಬಂದಿಗಳಿಗೆ ಬಾತ್ಮಿದಾರರು ಹೇಳಿದ್ದೆ ಸತ್ಯ ಎನ್ನುವಷ್ಟರ ಮಟ್ಟಕ್ಕೆ ಅವಲಂಬಿತರಾಗಿದ್ದಾರಾ ಇಲ್ಲಿನ ಸಿಬ್ಬಂದಿಗಳು?
ಆನಲೈನ್ ಕ್ರೀಕೇಟ್ವಬೆಟ್ಟಿಂಗ್ ಹೆಸರಲ್ಲಿ ಯಾವುದೆ ಪ್ರಕರಣಗಳು ದಾಖಲಾಗದಿದ್ದರು ಸಹ ಇಲ್ಲಿಗೆ ವಿಚಾರಣೆಗೆ ಕರೆತಂದು ತಮಗೆ ಬೇಕಾದ ಅನುಕೂಲ ಮಾಡಿಕೊಳ್ಳುತ್ತ ವಿಚಾರಣೆಗೆ ಕರೆತಂದವರ ಸಂಖ್ಯೆ ನೂರಕ್ಕೂ ಹೆಚ್ಚಾದರೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನುತ್ತವೆ ಬಲ್ಲ ಮೂಲಗಳು.ಆದರೆ ಈಗ ಈ ಔಟ್ ಪೋಸ್ಟ್ ಕೆಲ ಪೊಲೀಸ್ ರಿಗೆ ಅಕ್ರಮವಾಗಿ ಹಣಗಳಿಸುವ ಕೇಂದ್ರ ವಾಗಿ ಪರಿಣಮಿಸಿರುವುದು ಸಾರ್ವಜನಿಕರ ನೋವಿಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.