ಹೊಟೆಲ್ ಸಿಬ್ಬಂದಿಯನ್ನ ಥಳಿಸಿದ ಯುವಕರು ಮುಂದೆನಾಯ್ತು?
ಪುಂಡರ ಹಾವಳಿ!
ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಊಟದ ನೆಪದಲ್ಲಿ ಬಂದಿದ್ದ ನಾಲ್ಕೈದು ಯುವಕರ ಗುಂಪೊಂದು ಹೊಟೇಲ್ ಸಿಬ್ಬಂದಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ ಘಟನೆ ಹಳೆಹುಬ್ಬಳ್ಳಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಕಾರವಾರ ರಸ್ತೆಗೆ ಹೊಂದಿಕೊಂಡಂತೆ ಇರುವ ಖಾಸಗಿ ಹೊಟೇಲ್‌ಗೆ ಬಂದಿದ್ದ ನಾಲ್ಕೈದು ಯುವಕರ ತಂಡವೊಂದು ಮನಸ್ಸೋ ಇಚ್ಛೆ ತಿಂದ ನಂತರದಲ್ಲಿ ಕ್ಯಾತೆ ತೆಗೆದಿದ್ದಾರೆ.ಮೊದಲೆ ಪಾನಮತ್ತರಾಗಿದ್ದರು ಎನ್ನಲಾದ ಯುವಕರು ಹೊಟೇಲ್ ಮಾಲಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇ ವೇಳೆ ಪ್ರಶ್ನಿಸಿದ ಹೊಟೇಲ್ ಸರ್ವಂಟನನ್ನು ಯುವಕರು ಥಳಿಸಿದ್ದಾರೆ ಬಿಡಿಸಲು ಮುಂದಾದ ಮಾಲಿಕನಿಗೂ ಥಳಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಅಷ್ಟರಲ್ಲೇ ಹೊಟೇಲ್ ಮಾಲಿಕನ ಕುಟುಂಬದ ಕೆಲಸದಸ್ಯರು ಹೊಟೆಲ್ ಬಳಿ ಬಂದಿದ್ದಾರೆ. ಇ ವೇಳೆಗೆ ಗಲಾಟೆ ನಡೆಸಿ ಸ್ಥಳದಿಂದ ಪಲಾಯನ ವಾಗುತ್ತಿದ್ದ ಯುವಕರನ್ನು ಹಿಡಿದು ಒದೆಕೊಟ್ಟಿದ್ದಾರೆ.
ಇ ವೇಳೆಗೆ ಹಳೆಹುಬ್ಬಳ್ಳಿ ಪೊಲೀಸರೊಬ್ಬರು ಸ್ಥಳಕ್ಕೆ ಆಗಮಿಸಿ ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ.
ಘಟನೆಯ ಕುರಿತು ಇದು ವರೆಗೂ ಯಾವುದೆ ದೂರು ಹಳೆಹುಬ್ಬಳ್ಳಿ ಪೊಲಿಸ್ ಠಾಣೆಯಲ್ಲಿ ದಾಖಲಾಗಿಲ್ಲ ಎನ್ನಲಾಗಿದೆ. ಪ್ರಾಮಾಣಿಕ ಹಾಗೂ ದಕ್ಷತೆಗೆ ಹೆಸರು ವಾಸಿಯಾಗಿರುವ ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸುವ ಪುಂಡರ ಮೇಲೆ ಕಾನೂನು ಕ್ರಮ ಜರುಗಿಸದೆ ಇರುವುದು ರಾಜಕೀಯ ಒತ್ತಡ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎನ್ನುವುದು ಪ್ರಜ್ಙಾವಂತರ ಅಭಿಪ್ರಾಯ ವಾಗಿದೆ.