POWER CITYNEWS : HUBLI-DHARWAD
ಧಾರವಾಡ : ಕೃಷಿ ಇಲಾಖೆ, ರೈತ ಸಮಾಜ
ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಧಾರವಾಡದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಪಾಟೀಲ್ ಉದ್ಘಾಟಿಸಿದ್ರು.
ಇನ್ನೂ ಉಧ್ಘಾಟಕರಾಗಿ
ಆಗಮಿಸಿದ್ದ ಕೃಷಿ ವಿವಿ ಕುಲಪತಿ ಪಿ.ಎಲ್.ಪಾಟೀಲ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಕೃಷಿಯನ್ನು ಮಾಡುತ್ತಿರುವಾಗ ಮಣ್ಣಿನ ಫಲವತ್ತತೆ ಬಗ್ಗೆ ಎಚ್ಚರಿಕೆ ವಹಿಸುತ್ತಾ ಇರಬೇಕು. ಹಾಗೂ ಸಮಗ್ರ ಕೃಷಿ ಮೈಗೂಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಬೇಕೆಂದರು.ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಪ್ರಗತಿಪರ ಕೃಷಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬರದನಾಡು ನವಲಗುಂದ ತಾಲೂಕಿನ ಪ್ರಗತಿ ಪರ ರೈತ ಡಾ.ಶೌಕತ ಅಲಿ ಲಂಬೂನವರ್ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೃಷಿ ನಮ್ಮ ದೇಶದ ಉಸಿರು. ಕೃಷಿಯನ್ನೇ ನಂಬಿ ಬಹುತೇಕರು ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದಾರೆ. ಇದಕ್ಕೆಲ್ಲಾ ಶ್ರಮ ಬೇಕಾಗುತ್ತದೆ. ಕೃಷಿಕರು ಕೃಷಿಯನ್ನು ಉಪಕೃಷಿಯನ್ನಾಗಿ ಮಾಡುವುದರ ಜೋತೆಗೆ ಲಾಭದಾಯಕ ಬೆಳೆ ತೆಗೆಯಬಹುದು. ಉದಾಹಾರಣೆಗೆ ಕೋಳಿ ಸಾಕಾಣಿಕೆ, ಕುರಿಸಾಕಾಣಿಕೆ, ತರಕಾರಿ ಬೆಳೆ, ತೋಟಗಾರಿಕೆ ಬೆಳೆ ಜೋತೆಗೆ ಆಹಾರ ಧಾನ್ಯಗಳನ್ನು ಬೆಳೆಯುವುದರಿಂದ ರೈತರು ಸಮಗ್ರವಾಗಿ ಆರ್ಥಿಕ ದೃಷ್ಟಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯ.ಈ ನಿಟ್ಟಿನಲ್ಲಿ ರೈತರು ಕೃಷಿಯನ್ನು ಒಂದು ರೀತಿಯಲ್ಲಿ ಅಭಿವೃದ್ಧಿಯತ್ತ ಒಯ್ಯಬಲ್ಲ ಸಾಮರ್ಥ್ಯ ಸಾಧಿಸುತ್ತಾರೆ ಎಂದರು.
ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ, ಕುರಿಸಾಕಾಣಿಕೆ ಹಾಗೂ ಕೃಷಿ ಬಗ್ಗೆ ತರಬೇತಿ ಪಡೆಯುತ್ತಿರುವ ಯುವ ಕೃಷಿಕರು ಭಾಗಿಯಾಗಿ ರಾಷ್ಟ್ರೀಯ ರೈತ ದಿನಾಚರಣೆ ಮಹತ್ವ ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.