Political news

ಈದ್ಗಾ ಗಣಪತಿ ವಿಸರ್ಜನೆಗೆ :ಯತ್ನಾಳ್!

POWERCITY NEWS: Hubli

ಹುಬ್ಬಳ್ಳಿ: ಯಾವುದೇ ತೊಂದರೆ ಇಲ್ಲದೆ ಗಣೇಶ ಪ್ರತಿಷ್ಠಾಪನೆ ಆಗಿದೆ. ಈದ್ಗಾ ಮೈದಾನದಲ್ಲಿ ಸರಳ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಆಗಬೇಕಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರದಲ್ಲಿ ಅದು ಆಗಲಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಪ್ರತಿಷ್ಠಾಪನೆ ಮಾಡಿದ್ದ ಸಂಸ್ಥೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಗಿತ್ತು. ಆದ್ರೇ ಪಾಲಿಕೆ ಆಯುಕ್ತರ ಮೇಲೆ ಒತ್ತಡ ಇರೋ ಕಾರಣಕ್ಕೆ ಠರಾವು ಆದೇಶಕ್ಕೆ ಬರಲಿಲ್ಲ ಎಂದರು.

ಸಂಘಟನೆಗಳು ನಮ್ಮ ಗಮನಕ್ಕೆ ತಂದ ಮೇಲೆ ಎರಡುದಿನ ಹೋರಾಟ ಮಾಡಬೇಕಾಯ್ತು. ಕೊನೆಗೆ ಸರ್ಕಾರ ಅಲ್ಪ ಸಂಖ್ಯಾತರ ಒಲೈಕೆ ಬಿಟ್ಟು ನಮಗೆ ಅನುಮತಿ‌ ಸರ್ಕಾರ ಕೊಟ್ಟಿದೆ. ನಿನ್ನೆ ಶಾಂತ ರೀತಿಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಯಾಗಿದೆ.
ನಾಳೆ 12 ಗಂಟೆಗೆ ವಿಸರ್ಜನೆಯಾಗಲಿದೆ. ಗಣೇಶ ವಿಸರ್ಜನೆ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.

ಯತ್ನಾಳ ಅಲ್ಲದೆ ಬಿಜೆಪಿ ಅನೇಕ ಮುಖಂಡರು ವಿಸರ್ಜನೆ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
ಹಿಂದೂ ಸಂಘಟನೆಗಳು ಭಾಗಿಯಾಗಲಿದ್ದಾರೆ..
ಸಿಟಿ ರವಿ ಕೂಡಾ ವಿಸರ್ಜನೆ ಭಾಗಿಯಾಗಬಹುದು ಎಂದು ಅವರು ಮಾಹಿತಿ ನೀಡಿದರು.

ಇನ್ನೂ ಹೋರಾಟದ ಕುರಿತು ಮಾತನಾಡಿದ ಅವರು, ನಮಗೆ ಹೋರಾಟ ಬಿಟ್ಟು ಬೇರೆ ಮಾರ್ಗ ಇರಲಿಲ್ಲ. ಗಣೇಶ ಪ್ರತಿಷ್ಠಾಪನೆಗೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇತ್ತು. ನಾವು ಪಾಲಿಕೆ ಆಯುಕ್ತರ ಘೋಷಣೆ ಕೂಗಿಲ್ಲ. ಪಾಲಿಕೆ ಆಯುಕ್ತರು ಒಳ್ಳೆಯವರೇ ಎಂದ ಅವರು, ಆದರೆ ಅವರಿಗೆ ಒತ್ತಡ ಇತ್ತು ಎಂದ ಅರವಿಂದ ಬೆಲ್ಲದ ಹೇಳಿದರು.

Related Articles

Leave a Reply

Your email address will not be published. Required fields are marked *