BREAKING NEWSCITY CRIME NEWSDHARWADPoliceTWINCITYUncategorized

ಮೈಕ್ರೋಫೈನಾನ್ಸ್ ಒತ್ತಡಕ್ಕೆ ಬಲಿಯಾಯ್ತು ಬಡ ಮಹಿಳೆ ಜೀವ!

Sucide !

POWER CITYNEWS : DHARWAD

ಧಾರವಾಡ : ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಕಿರು ಸಾಲದ ನೆಪದಲ್ಲಿ ಬಡ ಮಹಿಳೆಯರನ್ನೇ ಗುರಿಯಾಗಿಸಿಕೊಂಡು‌ ಗಲ್ಲಿ ಗಲ್ಲಿ ಗಳಿಗೆ ಹೋಗಿ ಹತ್ತರಿಂದ ಇಪ್ಪತ್ತೈದು ಬಡ ಮಹಿಳೆಯರನ್ನು ಒಟ್ಟುಗೂಡಿಸಿ ಗುಂಪುಗಳನ್ನಾಗಿ ವಿಗಡಿಸಿ, 25-50 ಸಾವಿರದ ವರೆಗೂ ಸಾಲ ನೀಡುವ ಮೂಲಕ ಮೈಕ್ರೋ ಫೈನಾನ್ಸ್ ಗಳು. ಬಡವರ ಜೀವನಕ್ಕೆ ಅನುಕೂಲಕ್ಕಿಂತ ಸಾಲ ಮರುಪಾವತಿ ವೇಳೆ ಎಲ್ಲಿಲ್ಲದ ನರಕದರ್ಶನ ಮಾಡಿಸುತ್ತವೆ.ಇಂತಹ ಪ್ರಕ್ರಿಯೆಗಳಿಗೆ ಮರ್ಯಾದೆಗೆ ಅಂಜುವ ಕೆಲವು ಮಹಿಳೆಯರು ಊರು ಬಿಟ್ಟೋ ಅಥವಾ ಲೋಕವನ್ನೇ ಬಿಟ್ಟು ಸಾವಿನ ದಾರಿ ಹಿಡಿಯುತ್ತಿರುವುದು ಅಕ್ಷರಶಃ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ.

ಸಾಂದರ್ಭಿಕ ಚಿತ್ರ

ಹೌದು ಧಾರವಾಡದ ಬಡ ಮಹಿಳೆಯೊಬ್ಬರು ಗುಂಪು ಸಂಘದಲ್ಲಿ ಪಡೆದಿದ್ದ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟಿಲ್ಲ ಎಂದು ಆರೋಪಿಸಿ ಸಂಘದ ಇತರ ಸದಸ್ಯರು ಸಾಲ ಕಟ್ಟೊವರೆಗೂ ಗಲ್ಲಿಯುದ್ದಕ್ಕೂ ಮಾನ ಮರ್ಯಾದೆ ಹಾಳು ಮಾಡುತ್ತಾರೆ. ಇದರಿಂದ ಭಯಗೊಂಡ ಮಹೀಳೆ ತನಗಿರುವ ಜವಾಬ್ದಾರಿಯಿಂದ ಕೈ ಚೆಲ್ಲಿದ ಸುಂದರವ್ವ ಗಂಭೆರ (48) ಎನ್ನುವ ಅಮಾಯಕ ಮಹಿಳೆಯು ತನಗಿರುವ ಮಕ್ಕಳನ್ನು ಅನಾಥರನ್ನಾಗಿಸಿ ನೆಣಿಗೆ ಶರಣಾದ ಘಟನೆ ಧಾರವಾಢದ ರಾಜನಗರದಲ್ಲಿ ನಡೆದಿದೆ.

ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದ ಮಹಿಳೆಗೆ ಮೈಕ್ರೋಫೈನಾನ್ಸ್ ಸಾಲದ ಕಿರುಕುಳ ಒಂದೆಡೆಯಾದರೆ, ಇತ್ತ ಪರಿಚಯಸ್ತನಾದ ಅಂದಾನಯ್ಯ ಎಂಬ ಐನಾತಿ ಕೂಡ ಇದೆ ಮಹಿಳೆಯಿಂದ ಎರಡು ಲಕ್ಷಕ್ಕೂ ಹೆಚ್ಚಿನ ಹಣ ಪಡೆದು ಮಹಿಳೆಗೆ ಮರಳಿ ನೀಡಲಿಲ್ಲವೆಂದು ಡೆತ್ ನೋಟಲ್ಲಿ ವಿವರಿಸಿದ್ದಾಳೆ. ಹೀಗಾಗಿ ಎಲ್ಲವನ್ನೂ ಅವಲೋಕಿಸಿದ ಮಹಿಳೆ ಸಾವಿನ ದಾರಿಯಲ್ಲಿ ಮಕ್ಕಳನ್ನ ಅನಾಥರನ್ನಾಗಿಸಿ ನೆಣಿಗೆ ಶರಣಾಗಿದ್ದಾಳೆಂದರೆ ನಮ್ಮ ಸಮಾಜ ಬಡವರನ್ನ ನಡೆಸಿಕೊಳ್ಳುತ್ತಿರುವ ರೀತಿ ಎಂಥದ್ದು ಎನ್ನುವುದೆ ಪ್ರಶ್ನೆ ಯಾಗಿದೆ.

ಇದೀಗ ಡೆತ್ ನೋಟಲ್ಲಿ ಬರೆದಿರುವ ಮಹಿಳೆ ಸತ್ತರೆ ಯಾವುದಾದರೂ ದವಾಖಾನೆಗೆ ಶರೀರವನ್ನು ದಾನಮಾಡಿ ಅಂದಿರುವ ಆಕೆ ತನ್ನ ಶರೀರವನ್ನ ಮಣ್ಣುಮಾಡುವಷ್ಟು ಹಣಕೂಡ ಆ ಮಹಿಳೆಯ ಬಳಿ ಇರಲಿಲ್ಲ ಎಂಬ ಸತ್ಯ ಅರಿತಿದ್ದಾಳೆ. ಆರ್ಥಿಕವಾಗಿ ನೊಂದಿದ್ದ ಸುಂದರಮ್ಮ ತನ್ನ ಮಗಳಿಗೆ “ಯಾರದೂ ಹಂಗಿನಲ್ಲಿ ಇರಬೇಡ ಮಗಳೆ” ಎಂದಿದ್ದಾಳೆ,ಮಧ್ಯ ವ್ಯಸನಿಯಾಗಿರುವ ಮಗನಿಗೆ “ಕೈ ಮುಗಿತಿನಿ ಮಗನೆ ಕುಡಿಯ ಬೇಡ” ಎಂದು ಬುದ್ದಿ ಹೇಳಿದ್ದಾಳೆ ಆ ತಾಯಿ. ತನಗಾದ ಅವಮಾನ,ವಿಶ್ವಾಸ ದ್ರೋಹ,ನಿಂದನೆ ಸಹಿಸಿಕೊಳ್ಳಲಾಗದೆ ಇಹಲೋಕವನ್ನು ತೈಜಿಸಿದ್ದಾಳೆ.
ಸಾವು ಎಲ್ಲವನ್ನು ಸರಿಮಾಡಲು ಸಾಧ್ಯವಿಲ್ಲ ತಾಯಿ ಇಲ್ಲಿ ಭೂಮಿಯನ್ನೆ ಬಗೆದು ತಿಂದು ಹಾಡಹಗಲೇ ಮೋಸ ಮಾಡಿ ಬದುಕುತ್ತಿರುವವರ ಮಧ್ಯೆ ನಿನಗೇಕೆ ಇಂತಹ ಯೋಚನೆ ಬಂತೊ ದೇವರೆ ಬಲ್ಲ.

ಸ್ಥಳಕ್ಕೆ ಯುವಕರ ಕಣ್ಮನಿ ಮಂಜುನಾಥ ಹೆಬಸೂರ:

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಒಡೋಡಿ ಬಂದ ಬಿಜೆಪಿಯ ಯುವ ಕಾರ್ಯಕರ್ತ ಮಂಜುನಾಥ ಹೆಬಸೂರ ಆತ್ಮಹತ್ಯೆಗೆ ಶರಣಾದ ಸುಂದರಮ್ಮನ ಮಕ್ಕಳಿಗೆ ಸಾಂತ್ವನ ಹೇಳಿ ಕೈಲಾದ ಸಹಾಯ ಮಾಡ್ತಿದ್ದಾನೆ.ಅಂದ್ರೆ ಅತನಲ್ಲಿರುವ ಮಾನವೀಯತೆಯ ಗುಣ ಎಂಥದ್ದು ಅಂತಾ ತೊರಿಸುತ್ತದೆ.

Related Articles

Leave a Reply

Your email address will not be published. Required fields are marked *