ದಾಂಪತ್ಯದಲ್ಲಿ ಸಾಮರಸ್ಯದ ಬೆಳಕು ಮೂಡಬೇಕು : ಬಸವಣ್ಣಜ್ಜನವರು!
POWERCITY NEWS
POWERCITY NEWS : HUBBALLI / kundagol
ಕುಂದಗೋಳ: ಇತ್ತೀಚಿನ ದಿನಮಾನಗಳಲ್ಲಿ ದಾಂಪತ್ಯದ ಸಮರಸ ಜೀವನ ಕಡಿಮೆಯಾಗುತ್ತಿದೆ. ಇದಕ್ಕೆಲ್ಲಾ ಭಾರತೀಯ ಸಂಸ್ಕ್ರತಿ ಸದಾಚಾರಗಳು,ಸಂಪ್ರದಾಯಗಳ ಕಡೆಗಣನೆಯೇ ಕಾರಣ ಎಂದು ವಿಷಾಧಿಸಿದ ಕಲ್ಯಾಣಪುರದ ಶ್ರೀ ಅಭಿನವ ಬಸವಣ್ಣಜ್ಜನವರು,ಆದರ್ಶ ಅನುಕರಣೆಯ ಮೇಲೆ ಬೆಳಕು ಚೆಲ್ಲುವಂತಾಗಲು ಇಂಥಹ ಕಾರ್ಯಕ್ರಮ ಅವಶ್ಯ ಎಂದರು.
ಪಟ್ಟಣದ ಕಲ್ಯಾಣಪುರದ ತ್ರಿವಿಧ ಶ್ರೀ ಬಸವಣ್ಣಜ್ಜನವರ ಸಭಾ ಭವನದಲ್ಲಿ ನೆನಪು ಪೌಂಡೇಶನ್ ಬಳಗವು ಶ್ರೀಕೃಷ್ಣ ಗುರೂಜಿ ಉಡುಪಿ ಅವರ ೫೨ ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ೨೮ ಜೋಡಿ, ಆದರ್ಶ ದಂಪತಿಗಳಿಗೆ ಸನ್ಮಾನ,ಗೌರವ ಸ್ಮರಣಿಕೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸತಿ- ಪತಿಗಳಲ್ಲಿ ಹೊಂದಾಣಿಕೆ ಇರಬೇಕು. ಪಾಶ್ಚಿಮಾತ್ಯ ಜೀವನ ಮರೆಯಾಗಬೇಕು ಎಂದರು.
ಬಂಡಿವಾಡ ಗಿರೀಶ ಆಶ್ರಮದ ಡಾ.ಎ.ಸಿ.ವಾಲಿ ಗುರೂಜಿ ಮಾತನಾಡಿ, ಸತಿ- ಪತಿಗಳಲ್ಲೊಂದಾಗುವ ಭಕ್ತಿ ಹಿತವಪ್ಪದು ಶಿವನಿಂಗೆ…ಭಕ್ತಿ,ರಸಮಯದಲ್ಲಿ ದಾಂಪತ್ಯ ಜೀವನವೂ ತನ್ಮಯತೆ ಮೂಡಿಸುತ್ತದೆ ಎಂದರಲ್ಲದೇ ಗಂಡ- ಹೆಂಡತಿ ಪಾರ್ವತಿ- ಪರಮೇಶ್ವರಂತೆ ಬಾಳಬೇಕು ಎಂದು ದಂಪತಿಗಳಿಗೆ ಶುಭ ಕೋರಿದರು.
ಶಾಸಕ ಎಂ.ಆರ್.ಪಾಟೀಲ್ ಮಾತನಾಡಿ, ಸಾಮರಸ್ಯದ ಬದುಕು ನಮ್ಮದಾಗಬೇಕು. ಇತ್ತೀಚಿನ ದಿನಮಾನಗಳಲ್ಲಿ ದಾಂಪತ್ಯದಲ್ಲಿ ಒಡಕುಂಟಾಗಿ ಕೋರ್ಟ್ ಮೆಟ್ಟಿಲೇರುವ ಅನೇಕ ಪ್ರಸಂಗಗಳು ನಡೆದಿವೆ. ಈ ವ್ಯವಸ್ಥೆ ನೋವು ತರಿಸಿದೆ. ಇಂಥಹ ಕಾರ್ಯಕ್ರಮಗಳು ಜಾಗೃತಿ ಮೂಡಿಸುವಂತವುಗಳು ಎಂದರು. ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಸನ್ಮಾನಿತ ದಂಪತಿಗಳಿಗೆ ಶುಭ ಕೋರಿದರು. ಪಂಚಗ್ರಹ ಹಿರೇಮಠದ. ಶ್ರೀ ಷ.ಬ್ರ.ಶಿತಿಕಂಠೇಶ್ವರ ಶಿವಾಚಾರ್ಯ ರು, ಶಿವಾನಂದ ,ಶಿವಾನಂದಮಠದ ಶ್ರೀಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಶ್ರೀ ಕೃಷ್ಣ ಗುರೂಜಿ ಉಡುಪಿ ಅವರ ಜನ್ಮ ದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ನೆನಪು ಪೌಂಡೇಶನ್ ಸಂಯೋಜಕ ವೀರೇಶ ಪ್ರಳಯಕಲ್ಮಠ ಪ್ರಾಸ್ತಾವಿಕ ವಾಗಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿ ವಿವರಿಸಿದರು.
ಪಟ್ಟಣ ಪಂಚಾಯತಿ ಮಾಜಿ ಅದ್ಯಕ್ಷ ವಾಗೀಶ್ ಗಂಗಾಯಿ, ಬಸವರಾಜ ಕೊಪ್ಪದ, ಶ್ರೀಮತಿ ಮಾಣಿಕ್ಯ ಚಿಲ್ಲೂರ, ಶ್ರೀ ಮತಿ ಪಾರ್ವತಿ ಶಾಬಾದಿಮಠ, ಮಲ್ಲಯ್ಯ ವಸ್ತ್ರದ, ರಾಜಶೇಖರ ಕೊಪ್ಪದ, ನಾಗರಾಜ ದೇಶಪಾಂಡೆ,ಈಶ್ವರಪ್ಪ ಗಂಗಾಯಿ,ಬರಮಗೌಡ ದ್ಯಾಮನಗೌಡ್ರ, ಪಂಚಾಕ್ಷರಯ್ಯ ಹಿರೇಮಠ,ವಿದ್ಯಾಧರ ಸುಂಕದ್, ಶೇಖರಪ್ಪ ಹರಕುಣಿ, ಮಂಜುನಾಥ ಪವಾಡಿ ಅಪ್ಪಣ್ಣ ನದಾಫ ಸಹಿತ ಹಲವರು ವೇದಿಕೆ ಮೇಲಿದ್ದರು.
ಬಸಯ್ಯ ಹಿರೇಮಠ ಸ್ವಾಗತಿಸಿ,ವಂದಿಸಿದರು.