ಲಡ್ಕಾ-ಲಡ್ಕಿ ರಾಜಿ ತೊ “ಪೊಲಿಸ್” ನೇ ಕೀಯಾ ಖಾಜಿ ಕೊ ರಾಜೀ!
ಹುಬ್ಬಳ್ಳಿ
ಹುಬ್ಬಳ್ಳಿ: ಪ್ರೀತಿಸಿ ಮನೆ ಬಿಟ್ಟು ಒಡಿ ಹೋಗಿದ್ದ ಯುವ ಜೋಡಿಯೊಂದು ಕುಟುಂಬದ ಮೂಲಗಳಿದ ರಕ್ಷಣೆ ಕೋರಿ ವಿಡಿಯೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಹೌದು ಹುಬ್ಬಳ್ಳಿ ಶಹರದ ಕೌಲಪೇಟೆಯ ನಿವಾಸಿ ಗಳಾದ ಯುವಕ ಸುಲ್ತಾನ್ ಬಾರುದವಾಲೆ ಹಾಗೂ ಯುವತಿ ಶಗುಪ್ತಾ ಶಿರೂರ ಎಂಬ ಈ ಇಬ್ಬರು ಒಂದೆ ಓಣಿಯ ಜೋಡಿ ಹಕ್ಕಿಗಳು.
ಶಗುಪ್ತಾ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದರೆ. ಸುಲ್ತಾನ ಸೆಂಟ್ರೀಂಗ್ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಪ್ರೀತಿಸುತ್ತಿದ್ದರು.
ಆದರೆ ಈ ವಿಚಾರ ಯುವತಿಯ ಮನೆಯವರಿಗೆ ಇಷ್ಟವಿರಲಿಲ್ಲ ಹಾಗಾಗಿ ಯುವಕ(ಸುಲ್ತಾನ)ನಿಂದ ದೂರವಿರುವಂತೆ ಯುವತಿ ಶಗುಫ್ತಾ ಗೆ ತಂದೆ-ತಾಯಿ ಚಿಕ್ಕಪ್ಪಂದಿರು ತಾಕೀತು ಮಾಡಿದ್ದರು. ಇದರಿಂದ ಗಾಬರಿಗೊಂಡ ಯುವ ಜೋಡಿಗಳು ಕಳೆದ ನಾಲ್ಕೈದು ದಿನಗಳ ಹಿಂದೆ ಹುಬ್ಬಳ್ಳಿ ಬಿಟ್ಟು ಬೇರೆಡೆ ಹೋಗಿದ್ದರು.
ಇತ್ತ ಯುವತಿ ನಾಪತ್ತೆ ಯಾಗುತ್ತಿದ್ದಂತೆ ಯುವತಿಯ ಕುಟುಂಬಸ್ಥರು ಕಮರಿಪೇಟೆ ಪೊಲಿಸ್ ಠಾಣೆಯ ಮೆಟ್ಟಲೆರಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಜಾಧವ್. ಯುವಕನ ಕುಟುಂಬಸ್ಥರನ್ನೂ ಕರೆಯಿಸಿ ವಿಚಾರಿಸಿದ್ದರು. ಯುವಕ ಸಂಪರ್ಕಕ್ಕೆ ಬಂದರೆ ಕೂಡಲೇ ತಿಳಿಸುವಂತೆ ಬುದ್ದಿ ಹೇಳಿದ್ದರು.
ಆದರೆ ಇತ್ತ ಯುವತಿಯ ಮನೆಯವರು ಎನೆ ಆದರು ಸಹ ನಮ್ಮ ಹುಡುಗಿಯನ್ನ ಅವನಿಗೆ (ಸುಲ್ತಾನ್) ಮದುವೆ ಮಾಡಿಸುವುದಿಲ್ಲ ಎಂದು ಪಟ್ಟು ಹಿಡಿದು ಹಗೆ ಸಾಧಿಸಲು ಕಾಯುತ್ತಿದ್ದರು.
ಆದರೆ ಇ ವಿಷಯದಲ್ಲಿ ಎರಡು ಕಡೆಯಿಂದ ನಡೆಯಬಹುದಾದ ತಪ್ಪನ್ನು ಅರಿತ ಕಮರಿಪೇಟೆಯ ಪೊಲಿಸರು ವಿಷಯವನ್ನ ಹಿರಿಯ ಪೊಲಿಸ್ ಅಧಿಕಾರಿಗಳಿಗೆ ತಿಳಿಸಿದ್ದರು. ಅವರು ನೀಡಿದ ಮಾರ್ಗದರ್ಶನ ಮೇರೆಗೆ ಠಾಣೆಯ ಇನ್ಸ್‌ಪೆಕ್ಟರ್ ಜಾಧವ ಎರಡು ಕಡೆಯ ಕುಟುಂಬ ಸದಸ್ಯರನ್ನ ಕೂರಿಸಿ ತಿಳಿ ಹೇಳಿದ್ದರಿಂದ ಯುವತಿಯ ಮನೆವರು ಸಹ ಒಪ್ಪಿ ಇಸ್ಲಾಮಿಕ್ ಧರ್ಮದ ಪ್ರಕಾರ ಖಾಜಿಸಾಬರು ನಿಖಾ ಮಾಡಿಸಿದ್ದಾರೆ.
ಇದರಿಂದ ನಿರಾತಂಕ ಗೊಂಡ ಪ್ರೇಮಿಗಳು ಅವಳಿನಗರದ ಪೊಲಿಸರಿಗೆ ಧನ್ಯವಾದ ತಿಳಸಿದ್ದಾರೆ.ಪೊಲಿಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ಪ್ರಶಂಸೆ ಪಾತ್ರವಾಗಿದೆ.