POWERCITY NEWS : LAND MAFIYA
!
ಹುಬ್ಬಳ್ಳಿ :ಅವಳಿನಗರ ಬೆಳೆದೆಂತೆಲ್ಲಾ ಇಲ್ಲಿನ ಭೂಮಿಗೆ ಬಂಗಾರಕ್ಕೂ ಮಿಗಿಲಾದ ರೇಟ್ ಫೀಕ್ಸ್ ಆಗಿವೆ ಎನ್ನೋದು ಭೂಮಿ ಖರೀದಿಸಲು ಮುಂದಾಗುವ ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಸಂಗತಿಯಾಗಿದೆ.
ವಿಷಯ ಇಷ್ಟೇ ಆಗಿದ್ರೆ ಹೋಗ್ಲಿ ಬಿಡಿ ಎನ್ನಬಹುದು ಆದ್ರೆ ಸೈಟು ಖರೀದಿಸಿ ಒಂದು ಪುಟ್ಟ ಗೂಡು ಕಟ್ಟಿಕೊಳ್ಳಲೇ ಬೇಕು ಎಂದು ಹಗಲಿರುಳು ಕಷ್ಟ ಪಟ್ಟು ಲಕ್ಷಾಂತರ ಹಣ ಜೋಡಿಸಿ ನಂತರ ಸೈಟ್ ಖರೀದಿಗೆಂದು ಏಜಂಟರ ಮೂಲಕವೆ ಪ್ಲಾಟ್ ಖರೀದಿಗೇ ಮುಂದಾಗುವಂತಹ ವ್ಯವಸ್ಥೆ ನಿರ್ಮಾಣ ವಾಗಿದೆ ಎನ್ನುವುದು ಮತ್ತೊಂದು ಬೇಸರ ಮೂಡಿಸು ವಿಚಾರ.
ಆದ್ರೆ ಸೈಟ್ ಖರೀದಿ ಗಾಗಿ ಲಕ್ಷ ಲಕ್ಷ ಹಣ ಕೊಟ್ಟು ಚೌಕಾಸಿ ಮಡಿ ಸೈಟ್ ಖರೀದಿ ಗೇ ಮುಂದಾಗುವ ಮುನ್ನ ಒಂದೊಮ್ಮೆ ಅವುಗಳ ದಾಖಲೆಗಳನ್ನು ಸಹ ತಿರುವಿ ಹಾಕ್ತೇವೆ. ನಂತರ ಸಣ್ಣ ಪುಟ್ಟ ವ್ಯತ್ಯಾಸ ಗಳಿದ್ದರೆ ಚರ್ಚಿಸುತ್ತೇವೆ ಇದು ಸಾಮಾನ್ಯ ಪ್ರಕ್ರಿಯೆ.
ಗಂಭೀರ ವಿಷಯವೆಂದ್ರೆ ಅದಿಕೃತ ಸೈಟಿನ ಮೂಲ ಮಾಲಿಕರ ಖಾಲಿ ಸೈಟಿಗೆ ಇನ್ಯಾವುದೊ ವ್ಯಕ್ತಿಯನ್ನ ತರುವ ಗ್ಯಾಂಗ್ ಮೂಲ ಮಾಲಿಕನ ಖೊಟ್ಟಿ ಗುರುತಿನ ದಾಖಲೆ ಸೃಷ್ಟಿಸಿ ಅದನ್ನೇ ಕೋಟಿ ಬೆಲೆಗೆ ಮಾರುವ ಮೂಲಕ ಕೊಟಿ ಕೊಟಿ ಲೆಕ್ಕದಲ್ಲಿ ಹಣ ಮಾಡುತ್ತಿರುವ “ಲ್ಯಾಂಡ್ ಮಾಫಿಯಾ” ಗ್ಯಾಂಗ್ ಅವಳಿನಗರದಲ್ಲಿ ಸಕ್ರಿಯವಾಗಿದೆ ಎನ್ನುವುದು ಸಾರ್ವಜನಿಕರಲ್ಲಿ ಆತಂಕ ಭಾರಿ ಮೂಡಿಸಿದೆ.
ಆದರೆ ಇದುವರೆಗೂ ಲ್ಯಾಂಡ್ ಮಾಫಿಯಾ ಗ್ಯಾಂಗ್ ಕೆಲವೊಂದು ಮೂಲ ಮಾಲಿಕರ ನಕಲಿ ದಾಖಲೆ ಬಳಸಿ ನಡೆಸಿರುವ ರಿಯಲ್ ಎಷ್ಟೇಟ್ ಸೋಲಿನಲ್ಲಿರುವ ಗ್ಯಾಂಗಿನ ಸರದಾರರ ಹಣೆಬರಹ ಬದಲಾಯಿಸಲೆಂದೆ ಈಗಾಗಲೇ ಸೈಲಂಟಾಗಿ ಬಂದ ದೂರುಗಳನ್ನು ಅವಳಿನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು “ಲ್ಯಾಂಡ್ ಮಾಫಿಯಾ” ಗ್ಯಾಂಗಿನ ಕೆಲವು ಫಂಟರ್ ಗಳ ಪೈಕಿ ಠಾಣೆಗೆ ತಂದು ಅಕ್ರಮ ವೆಸಗಿ ಪಾಲು ಹಂಚಿಕೊಂಡವರನ್ನ ಒದ್ದು ತಂದು ಬಾಯಿಬಿಡಿಸುವ ಕಾರ್ಯ ದೂರ ಉಳಿದಿಲ್ಲ ಎನ್ನಲಾಗಿದೆ.
ಇ ಕುರಿತು ಪವರ್ ಸಿಟಿ ನ್ಯೂಸ್ ಸಾಕಷ್ಟು ಸಾಕ್ಷಿ ಸಮೇತ ಭಂಡರ ಬಣ್ಣ ಬಯಲು ಮಾಡಲಿದೆ.