BREAKING NEWSUncategorizedViral Image

ಕಾರ್ಮಿಕ ಭವನದ ಲ್ಯಾಪ್ ಟಾಪ್ ಕಳ್ಳರ ಬಂಧನ!

POWER CITY NEWS : HUBLI

ಕಾರ್ಮಿಕ ಇಲಾಖೆಯ ಲ್ಯಾಪಟಾಪ್ ಕಳ್ಳತನ ಪ್ರಕರಣ: 26 ಜನರ ಬಂಧನ, 83 ಲ್ಯಾಪ್‌ಟಾಪ್ ವಶಕ್ಕೆ!

ಹುಬ್ಬಳ್ಳಿ
ಹುಬ್ಬಳ್ಳಿ ಕಾರ್ಮಿಕ ಭವನದಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 26 ಆರೋಪಿಗಳನ್ನು ಬಂಧನ ಮಾಡಲಾಗಿದೆ. ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್‌.ಶಶಿಕುಮಾರ್ ತಿಳಿಸಿದರು.
ಈ ಕುರಿತು ನಗರದಲ್ಲಿಂದು ಸುದ್ದಿಘೊಷ್ಟಿಯ ಕುರಿತು ಪ್ರಕರಣ ವಿವರಿಸಿದರು. ಸೆಪ್ಟೆಂಬರ್ 6 ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಲ್ಯಾಪ್‌ಟಾಪ್ ಗಳ ಕಳ್ಳತನದ ಕುರಿತು ಪ್ರಕರಣ ದಾಖಲಾಗಿತ್ತು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಂಚಿಕೆ ಮಾಡಲು ಹುಬ್ಬಳ್ಳಿಯ ಕಾರ್ಮಿಕ ಭವನದಲ್ಲಿ ತಂದಿಟ್ಟಿದ್ದ 83 ಲ್ಯಾಪ್‌ಟಾಪ್ ಗಳನ್ನು ಆರೋಪಿಗಳು ಕಳ್ಳತನ ಮಾಡಿದ್ದರು.
ದೀಪಕ ನಾಯಕ್, ಕೃಷ್ಣಾ ಕಬ್ಬೇರ್, ಸುಭಾಷ್ ಕುರಡಿಕೇರಿ, ಶ್ರೀನಿವಾಸ ಕೌಡೆನ್ನಣ್ಣವರ, ಸಾಯಿನಾಥ್ ಕೊರವರ, ನಾಗರಾಜ್ ಅಂಬೀಗೇರ್, ಪ್ರಕಾಶ ನಿಟ್ಟೂರ, ರುತಿಕ ಕ್ಯಾರಕಟ್ಟಿ, ಫೈರೋಜ್ ಕೊಳ್ಳೂರ, ಮಲ್ಲಿಕಾರ್ಜುನ ಹಂಚಿನಾಳ, ಮೇಗನ್ ಕಠಾರೆ, ಅರ್ಜುನ್ ವಾಲೀಕಾರ್, ದಾದಾಪೀರ್ ಮುಜಾಹಿದ್, ವಿನಾಯಕ ಹಿರೇಮಠ, ರಾಹುಲ್ ಕಮಡೊಳ್ಳಿ, ಅಭಿ ಚಲವಾದಿ, ಮಾಂತೇಶ್ ಇಜಾರದ, ಸುನೀ ಹುಬ್ಬಳ್ಳಿ, ಪ್ರಜ್ವಲ್ ಬಾಗಲಕೋಟ, ಹರೀಶದ ಸಗಡಿ, ರಂಜಾನ್ ಹಂಪಿಹೊಳ್ಳಿ, ಮಂಜುನಾಥ ಕ್ಯಾರಕಟ್ಟಿ, ನಾಗರಾಜ್ ಸರವಿ, ದರ್ಶನ ಲಗಟಗೇರಿ, ಚನ್ನಬಸಪ್ಪ ಬಿಸರಳ್ಳಿ, ರೇಣುಕಾ ಬಿಸರಳ್ಳಿ ಇವರು ಬಂಧಿತ ಆರೋಪಿಗಳಾಗಿದ್ದಾರೆ.
45 ಲಕ್ಷ ರೂ. ಮೌಲ್ಯದ 83 ಲ್ಯಾಪ್‌ಟಾಪ್ ಗಳು, ಕೃತ್ಯಕ್ಕೆ ಬಳಸಿದ 1 ಕಾರ್, 2 ಆಟೋ, 2 ಬೈಕ್ ಸೇರಿ ಒಟ್ಟು 60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಲ್ಯಾಪ್‌ಟಾಪ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *