ಕಾವೇರಿ ನೀರನ್ನು ಅನ್ಯ ರಾಜ್ಯಕ್ಕೆ ಬಿಡದಂತೆ ಒತ್ತಾಯಿಸಿ “AAP” ನಿಂದ ರಾಜ್ಯ ಪಾಲರಿಗೆ ಮನವಿ!
AAP PROTEST
POWERCITY NEWS: HUBBALLI
ಹುಬ್ಬಳ್ಳಿ : ಸೂಕ್ತ ಸಮಯಕ್ಕೆ ಮಳೆಗಳು ಸಕಾಲದಲ್ಲಿ ಆಗದ ಕಾರಣ ಕಾವೇರಿ ನದಿಯ ಅಂತರ್ಜಲ ನೀರಿನ ಮಟ್ಟ ಇಳಿ ಮುಖವಾಗಿದ್ದಾಗಿಯೂ ಈ ಭಾಗದ ರೈತರಿಗೆ ಅನ್ಯಾಯ ವಾಗುತ್ತದ್ದರು ಸಹ ಆಡಳಿತ ಪಕ್ಷ ಮಾತ್ರ ರೈತ ವಿರೋಧಿ ಅನುಸರಿಸುತ್ತಿದೆ. ಕಳೆದ ಮೂರು ದಶಕದಿಂದಲೂ ದಕ್ಷಿಣ ಕರ್ನಾಟಕದ ಜನ ಸೇರಿದಂತೆ ಮತ್ತು ಪ್ರಮುಖವಾಗಿ ಸಿಲಿಕಾನ್ ಸಿಟಿ ಬೆಂಗಳೂರು ಕುಡಿಯುವ ನೀರಿಗಾಗಿ ಕಾವೇರಿ ನೀರನ್ನೇ ಅವಲಂಬಿತವೆಂಬುದನ್ನು ವೈಜ್ಞಾನಿಕವಾಗಿ ಅರಿತಿದ್ದರು ಸಹ ಅಧಿಕಾರ ಚುಕ್ಕಾಣಿ ಹಿಡಿಯುವ ಯಾವುದೇ ರಾಜಕೀಯ ಪಕ್ಷಗಳು ಮಾತ್ರ ಪ್ರತಿ ವರ್ಷವೂ ತಮಿಳುನಾಡಿಗೆ 177.25 ಟಿಎಂಸಿ ನೀರು ಯತೇಚ್ಛವಾಗಿ ಹರಿಸುತ್ತಲೆ ಬರುತ್ತಿದೆ. ಅದಲ್ಲದೆ ಕಬಿನಿ, ಕೆ.ಅರ್.ಎಸ್. ಮುಂತಾದ ಜಲಾಶಯಗಳ ಅನಿಯಂತ್ರಿತ ನೀರನ್ನು ಸಹ ತಮಿಳುನಾಡಿಗೆ ಹರಿಸುತ್ತಿದೆ.
ಆದರೆ ಆಡಳಿತ ಕಾಂಗ್ರೆಸ್ ಪಕ್ಷವೂ ತನ್ನ ಬೆಳೆ ಬೆಯಿಸಿಕೊಳ್ಳಲು ದೆಹಲಿಯ ಆಮ್ ಆದ್ಮಿ ಪಕ್ಷದ ಆಡಳಿತ ಮಾದರಿಯನ್ನು ಅನುಕರಿಸುತ್ತಾ ಗೃಹಜ್ಯೋತಿ, ಗೃಹಲಕ್ಷ್ಮಿ,ಶಕ್ತಿ ಯೋಜನೆ ಯಂತಹ ಯೋಜನೆಗಳನ್ನು ಕೊಡುತ್ತಿದೆಯಾದರೂ ಸಹ ಮತದಾರ ಪ್ರಭುಗಳ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ.ಎಂಬುದು ಸ್ಪಷ್ಟ ಕಾಣುತ್ತದೆ ರಾಜ್ಯ ಸರ್ಕಾರ, ಕೇಂದ್ರ ಸರಕಾರಗಳ ರಾಜಕೀಯ ಇಚ್ಛಾಶಕ್ತಿ ವಿರೋಧಿಸಿ ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಸಂಘಟನಾ ಕಾಯದರ್ಶಿ ಬಸವರಾಜ ತೇರದಾಳ ಅವರ ನೇತೃತ್ವದಲ್ಲಿ ತಹಶೀಲ್ದಾರ ಅವರ ಮುಖಾಂತರ ಕಾವೇರಿ ನೀರನ್ನು ತಡೆಯುವಂತೆ ಕರ್ನಾಟಕ ರಾಜ್ಯ ರಾಜಪಾಲರಿಗೆ ಮನವಿ ಸಲ್ಲಿಸಿದರು. ಇದನ್ನೆಲ್ಲ ಗಮನಿಸಿದರೆ ರಾಜ್ಯ ಸರಕಾರ ಪರೋಕ್ಷವಾಗಿ ನೀರಿನ ಟ್ಯಾಂಕರ ಮಾಫಿಯಾಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಭಾಸವಾಗುತ್ತದೆ ಎಂದು ಬಸವರಾಜ ತೇರದಾಳ ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿಯಾದ ಮಲ್ಲಪ್ಪ ತಡಸದ, ಮಾಧ್ಯಮ ಉಸ್ತುವಾರಿ ಮಲ್ಲಿಕಾರ್ಜುನಯ್ಯ ಹಿರೇಮಠ, ಜಿಲ್ಲಾ ರಾಜಕೀಯ ಚಟುವಟಿಕೆ ಉಸ್ತುವಾರಿ ರೇವಣಸಿದ್ದಪ್ಪ ಹುಬ್ಬಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಿಶೋರ ಶೆಟ್ಟಿ, ಮಹಾಂತೇಶ ಡವಲೇಶ್ವರ, ಶ್ರೀಕಾಂತ ಪಾಲಕರ ಮತ್ತಿತರರು ಉಪಸ್ಥಿತರಿದ್ದರು.
ಶಾಮ ನರಗುಂದ
ಪ್ರಧಾನ ಕಾರ್ಯದರ್ಶಿ
ಧಾರವಾಡ ಜಿಲ್ಲೆ
ಆಮ್ ಆದ್ಮಿ ಪಕ್ಷ
M: 9538381919