POWER CITYNEWS : HUBBALLI
ಧಾರವಾಡ : ನಗರ ಪ್ರದೇಶದಲ್ಲಿ ಎರಡು ಹೆಚ್ಚುವಾರಿಯಾಗಿ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಅಗ್ರಹಿಸಿ ಧಾರವಾಡದ ಡಿಸಿ ಕಚೇರಿ ಬಳಿ ಕರ್ನಾಟಕ ರಕ್ಷಣಾ ವೇದಿಯ ಪ್ರವೀಣ ಶೆಟ್ಟಿ ಬಣದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಬೆಳಗಾವಿ ವಿಭಾಗಿಯಮಟ್ಟದ ಹಾಗೂ ಧಾರವಾಡ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಹೆಚ್ಚುವರಿ ಪೊಲಿಸ್ ಠಾಣೆ ಬೇಕೇ ಹೆಚ್ಚುವರಿ ಪೊಲೀಸ್ ಠಾಣೆ ಬೇಕು ಎಂದು ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಧಾರವಾಡ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಉತ್ತರ ಕರ್ನಾಟಕದ ವಿದ್ಯಾರ್ಜನೆಗೆ ಹೆಸರುವಾಸಿಯಾಗಿರುವ ಧಾರವಾಡ ಜಿಲ್ಲಾ ಕೇಂದ್ರಬಿಂದು ವಾಗಿರುವುದರಿಂದ ಇಲ್ಲಿ ದೂರದ ಊರಿನಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಅರಸಿ ಬರುತ್ತಾರೆ. ಅಲ್ಲದೆ ಧಾರವಾಡ ನಗರವನ್ನು ಶಾಂತಿ ಪ್ರೀಯ, ಸಾಹಿತಿಗಳ ತವರೂರೆಂದು ಕರೆಸಿಕೊಳ್ಳುತ್ತದೆ. ಈಗಿರುವ ಪೊಲೀಸ್ ಠಾಣೆಗೆ ಹೆಚ್ಚಿನ ಜವಾಬ್ದಾರಿ ಬೀಳುತ್ತಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಒಂದು ಲಾ ಆ್ಯಂಡ್ ಆರ್ಡ್ ಪೊಲೀಸ್ ಠಾಣೆ ಹಾಗೂ ಇನ್ನೊಂದು ಸಂಚಾರಿ ಪೊಲೀಸ್ ಠಾಣೆ ತೆರೆಯಬೇಕಾಗಿದೆ. ನಗರದಲ್ಲಿ ಬಾಲ ಬಿಚ್ಚಿರುವ ದುಷ್ಟ ಶಕ್ತಿಗಳ ಮಟ್ಟಾ ಹಾಕುವ ನಿಟ್ಟಿನಲ್ಲಿ ಇವೆರಡು ಪೊಲೀಸ್ ಠಾಣೆಗಳ ಅವಶ್ಯಕತೆ ತುಂಬಾ ಇದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ನಾವು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.