IPL ಬೆಟ್ಟಿಂಗ್ ಹಣಕ್ಕಾಗಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ
sc ನಂ 137/19 ನೇ ಪ್ರಕರಣದಲ್ಲಿ ಗೋಕಾಕ ತಾಲೂಕಿನ ಹೊಸ ಎರಬುದ್ದಿ ಗ್ರಾಮದ ಶ್ರೀಮತಿ ಲತಾ ಕೋರಿ ಭೀಮಪ್ಪ ನಾಡಗೌಡ ಇವರ ಏಕ್ ಮಾತ್ರ ಪುತ್ರನಾದ ವಿಕ್ರಮ್ ಇವನು ಧಾರವಾಡದ ಮಹೇಶ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಕೊಚಿಂಗ್ ಕ್ಲಾಸ್ಗೆ ಹೋಗುತ್ತಿದ್ದ.
2019 ರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಪ್ರಕರಣದ ಆರೋಪಿ ಫಾರೂಕ್ ತಂದೆ ನೂರಅಹಮ್ಮದ ಬೆಳಗಾಂವಕರ ಇವರೊಂದಿಗೆ 2000/- ರೂ ಬೆಟ್ಟಿಂಗ್ ಹಣ ಕಟ್ಟಿ ಸದ್ರಿ ಬೆಟ್ಟಿಂಗ್ನಲ್ಲಿ ಮೃತ ವಿಕ್ರಮ್ನೂ ಸೋತಿದ್ದರಿಂದ ಆರೋಪಿತನಿಗೆ 2,000/- ರೂ ಹಣ ಕೊಡಬೇಕಾಗಿತ್ತು.
ಮೃತನು ಹಣ ಕೊಡವುದನ್ನು ಮುಂದೆ ಮುಂದೆ ಹಾಕುತ್ತಿದ್ದಾಗ ಸಿಟ್ಟಾದ ಆರೋಪಿತನು ಎಪ್ರಿಲ್ ತಿಂಗಳ 14 ನೇ ತಾರೀಖು
2019 ರಂದು ವಿಕ್ರಮ್ಗೆ ಕೊಲೆ ಮಾಡಬೇಕೆಂದು ನಿರ್ಧರಿಸಿ, ರಾತ್ರಿ 10.30 ಗಂಟೆ ಸುಮಾರಿಗೆ ತನ್ನ ಜೇಬಿನಲ್ಲಿ ಚಾಕೂ ಇಟ್ಟುಕೊಂಡು ವಿಕ್ರಮ್ ವಾಸ ಮಾಡುತ್ತಿದ್ದ ಪಿ.ಜಿ ಕಡೆಗೆ ಬಂದು ಮೃತ ವಿಕ್ರಮ್ ನೊಂದಿಗೆ ಬೆಟ್ಟಿಂಗ್ನಲ್ಲಿ ಗೆದ್ದ 2,000/- ರೂ ಹಣ ವಿಕ್ರಮ್ ಕೊಡದೆ ಇದ್ದಾಗ ಚಾಕೂವಿನಿಂದ ವಿಕ್ರಮ್ನ ಹೊಟ್ಟೆಗೆ ಜೋರಾಗಿ ಚುಚ್ಚಿ ಗಾಯಪಡಿಸಿದ್ದ.
ಮೃತ ವಿಕ್ರಮ್ನು ಹುಬ್ಬಳ್ಳಿಯ ಸೂಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮರಣ ಹೊಂದಿದ್ದು ಈ ಬಗ್ಗೆ ಧಾರವಾಡ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರೀ ಮಹಾಂತೇಶ ಬಸಾಪೂರ ಪೊಲೀಸ್ ಇನ್ಸಪೇಕ್ಟರ್ ಇವರು ಆರೋಪಿತನ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಧಾರವಾಡದ ಮಾನ್ಯ 4ನೇ ಅಧಿಕ ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶ ಶ್ರೀಮತಿ ಪಂಚಾಕ್ಷರಿ. ಎಮ್, ಇವರು ವಿಚಾರಣೆ ನಡೆಸಿ ದಿ: 11-04 2022 ರಂದು ಆರೋಪಿಯನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ಮತ್ತು 10,000/ ರೂ ದಂಡವನ್ನು ವಿಧಿಸಿದ್ದು ಸದರಿ ದಂಡದ ಹಣವನ್ನು ಮೃತನ ತಾಯಿಗೆ ನೀಡುವಂತೆ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಶ್ರೀ ಪ್ರಶಾಂತ್ ಎಸ್ ತೊರಗಲ್ಲ ಇವರು ವಾದ ಮಂಡಿಸಿದ್ದರು.