ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಜಿಲ್ಲೆಯಲ್ಲಿ ನಿಲ್ಲದ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಲು ಕ್ರಮ: ಗೌಡನಾಯ್ಕರ್!
ಕರಡಿಕೊಪ್ಪ ಅನಧಿಕೃತ ಮುರ್ರಂ ಗಣಿಗಾರಿಕೆ ಎರಡು ವಾಹನಗಳ ವಶಕ್ಕೆ!
ಹುಬ್ಬಳ್ಳಿ ಜುಲೈ 27:ಕರ್ನಾಟಕ ವಾರ್ತೆ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ಹುಬ್ಬಳ್ಳಿ ತಾಲ್ಲೂಕಿನ ಕರಡಿಕೊಪ್ಪ ಗ್ರಾಮದ ರಿ.ಸ.ನಂ : 12/3 ರಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಒಂದು ಜೆ.ಸಿ.ಬಿ ಸಂಖ್ಯೆ : KA24M 6320 ಹಾಗೂ ಒಂದು ಟಿಪ್ಪರ್ ಲಾರಿ ಸಂಖ್ಯೆ : KA63 9512 ಜಪ್ತು ಮಾಡಿದ್ದಾರೆಪ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಛಬ್ಬಿ ಹೊರವಲಯ ಪೊಲೀಸ್ ಠಾಣೆ ವಶಕ್ಕೆ ವಾಹನಗಳನ್ನು ನೀಡಲಾಗಿದೆ . ಇಲಾಖೆಯಿಂದ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭೂವಿಜ್ಞಾನಿ ಮಹೇಶ ಗೌಡನಾಯ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.