Festival Ganesh chaturthiHubballiಸ್ಥಳೀಯ ಸುದ್ದಿ

ಹುಬ್ಬಳ್ಳಿಯಲ್ಲಿ ಮನಸೂರೆಗೊಂಡ ಕೇರಳ “ಶಾಸ್ತ್ರೀಯ ಸಿಂಗಾರಿ” ವಾದ್ಯ!

POWERCITY NEWS : HUBBALLI /

ಹುಬ್ಬಳ್ಳಿ ನಾಗಲಿಂಗ ನಗರ ಗಜಾನನ ಯುವಕ ಮಂಡಳಿ ಬಳಗದ ಗಣಪತಿಗೆ ಅರ್ಥಪೂರ್ಣ ವಿದಾಯ: ಡಿಜೆ ಬ್ಯಾನ್ ಕೇರಳದ ಪ್ರಖ್ಯಾತಿ ಸಿಂಗಾರಿ ವಾದ್ಯಕ್ಕೆ ಜೈ ಎಂದ ನಾಗಲಿಂಗನಗರ ಯುವಕ ಮಂಡಳಿ

ಹುಬ್ಬಳ್ಳಿ: ಸಾಮಾನ್ಯವಾಗಿ ಗಣಪತಿ ಪ್ರತಿಷ್ಠಾಪನೆ ಹಾಗೂ ವಿದಾಯ ದಿನದಂದು ಬಹುತೇಕ ಸಾರ್ವಜನಿಕ ಗಣಪತಿ ಮಂಡಳಿಗಳು ಡಿಜೆ ಬಳಸಿಕೊಂಡು ವಿಘ್ನ ನಿವಾರಕನನ್ನು ಆಗಮನಕ್ಕೆ ಹಾಗೂ ವಿಸರ್ಜನೆ ವೇಳೆ ಸಂಭ್ರಮಿಸುವುದು ಎಲ್ಲ ಕಡೆಯೂ ಕಂಡು ಬರುವ ಸಾಮಾನ್ಯ ದೃಶ್ಯ.

ಆದರೆ ಹುಬ್ಬಳ್ಳಿಯ ನಾಗಲಿಂಗ ನಗರ ಗಜಾನನ ಯುವಕ ಮಂಡಳಿ ಇದಕ್ಕೆಲ್ಲ ನಿಷೇಧ ಹೇರಿಕೊಳ್ಳುವ ಮೂಲಕ ಅತ್ಯಂತ ಸಂಭ್ರಮದೊಂದಿಗೆ ಕೇರಳದ ಪ್ರಖ್ಯಾತಿ ದೇಶಿಯ ಸಿಂಗಾರಿ ವಾದ್ಯ ತರಿಸುವುದರ ಮೂಲಕ ಅರ್ಥ ಪೂರ್ಣ ವಿದಾಯ ಹೇಳಿದರು.

ಹುಬ್ಬಳ್ಳಿ ನಗರದ ನಾಗಲಿಂಗ ನಗರ ಅನಂದ ನಗರ ಮುಖ್ಯ ರಸ್ತೆಯಲ್ಲಿ ಸ್ಥಾಪಿಸಲಾಗಿದ್ದ ಗಜಾನನ ಯುವಕ ಮಂಡಳಿ ವಿಘ್ನ ನಿವಾರಕನಿಗೆ ಇಂದು ಮಂಡಳಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಭಕ್ತಿ ಮೆರೆದರು.

ಕೇರಳ ಮೂಲದ ಶಾಸ್ತ್ರೀಯ ಸಿಂಗಾರಿ ವಾದ್ಯ ಮೇಳವನ್ನು ತರಿಸುವ ಮೂಲಕ ಯುವಕ ಮಂಡಳಿಯರು ನೋಡುಗರು ಗಮನ ಸೆಳೆದರು. ನಾಗಲಿಂಗ ನಗರ ಗಣೇಶ ಪ್ರತಿಷ್ಠಾನೆಯ ಸ್ಥಳದಿಂದ ಸಿದ್ದಾ ರೋಡ್ ಮಠದ ಇಂಡಿ ಪಂಪ ಮಾರ್ಗವಾಗಿ ಗ್ಲಾಸ್ ಹೌಸ್ ಗೇ ವಿಘ್ನ ನಿವಾರಕನ ಮೆರವಣಿಗೆಯು ನೋಡುಗರ ಗಮನ ಸೆಳೆಯಿತು. ಇ ಸಂಧರ್ಭದಲ್ಲಿ ಪಾಲಿಕೆ ಸದಸ್ಯ ಆರಿಫ್ ಬದ್ರಾಪೂರ ಅನೀಲ್ ದೇಶ್ಪಾಂಡೆ, ಇಮ್ತಿಯಾಜ್ ಬಿಜಾಪುರ ಗಣೆಶ ಶಾಲ್ಗಾರ್, ಹರಿಪ್ರಸಾದ್ ನಾಯ್ಯರ,ಆರೂಢ್ ವಾಂಜ್ರೇ ಪ್ರಶಾಂತ ಸವಾಸೇ, , ಪ್ರವೀಣ ಹೀರೆಮಠ, ವೆಂಕರಡ್ಡಿ ಮೂಳೂರ, ರಾಜೇಶ ಚೌದ್ರಿ ಪಕ್ಕಿರಪ್ಪ ದೇಸಾಯಿ, ಸಂದೀಪ ಗೊಕ್ರಾಳ, ರಮೇಶ ಹಾಕ್ರಾಳ

ಇನ್ನೂ ಗಣಪತಿ ಮೆರವಣಿಗೆ ಉದ್ದಕ್ಕೂ ಯಾವುದೇ ಅಹಿಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ ಹಾಕಲಾಯಿತು. ಕೇರಳ ಮೂಲದ ಸಿಂಗಾರಿ ವಾದ್ಯ ಮೇಳದಲ್ಲಿ ಯುವಕ ಯುವತಿಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *