POWER CITYNEWS: HUBLI
ಹುಬ್ಬಳ್ಳಿ : ಸಾಮಾಜಿಕ ಕಳಕಳಿಗೆ ಮುಂದಾದ ಸಾಧನಾ ಎಜುಕೇಶನಲ್ ಮತ್ತು ವೆಲ್ಫೇರ್ ಸೊಸೈಟಿಯಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಪಾಲಿಕೆ ಸದಸ್ಯ ಆರೀಫ್ ಭದ್ರಾಪೂರ ನೆರವೆರಿಸಿದರು.
ಹಳೆಹುಬ್ಬಳ್ಳಿ ಆನಂದನಗರದಲ್ಲಿನ ಸಾಧನಾ ಎಜ್ಯುಕೆಷನಲ್ ಎಂಡ್ ವೆಲ್ಫೇರ್ ಸೊಸೈಟಿ ಮುಖ್ಯ ಕಚೇರಿ ಎದುರು ನಡೆದ ಧ್ವಜಾರೋಹಣದ ಕಾರ್ಯಕ್ರಮದ ನಡೆಯಿತು. ಈ ವೇಳೆ ಸಂಸ್ಥೆಯು ಆನಂದನಗರ,ಮಯೂರನಗರ,ಘೋಡ್ಕೆ ಪ್ಲಾಟ್,ನವ ಆನಂದನಗರ,ಫತೇಶಾವಲಿ ನಗರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಬಡ ಜನರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಜಾರಿಗೆ ಬರುವ ಯೋಜನೆಗಳು ಹಾಗೂ ಅವುಗಳ ಪ್ರಯೋಜನಗಳನ್ನು ದೊರಕಿಸಿ ಕೊಡುವಲ್ಲಿ ಸಂಘ ಯಾವತ್ತೂ ಜನಸೇವೆಗೆ ಸಿದ್ಧವಿರುತ್ತದೆ. ಇದರ ಪ್ರಯೋಜನವನ್ನು ಕಚೇರಿ ಸ್ಥಾಪಿಸಿದ ಮೂರು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚಿನ ಫಲಾನುಭವಿಗಳು ಸಂಸ್ಥೆಯ ಉಪಯೋಗ ಪಡೆದುಕೊಂಡಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಯೂಸೂಫ್ ಬೇಪಾರಿ ತಿಳಿಸಿದರು.
ಸರ್ಕಾರದಿಂದ ಕೊಡಮಾಡುವ ಯೋಜನೆಗಳನ್ನ ಜನರ ಬಾಗಿಲಿಗೆ ಮುಟ್ಟಿಸುವ ಪ್ರಯತ್ನಕ್ಕೆ ಮುಂದಾಗಿರುವ ಸಂಸ್ಥೆಯ ಸಾಮಾಜಿಕ ಕಳಕಳಿಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.