BREAKING NEWSCITY CRIME NEWSDHARWAD

ಕೊಟಿ ಕೊಟಿ ಹಣ ಜಪ್ತಿ ಎಲ್ಲಿ ಗೊತ್ತಾ?

POWER CITY NEWS!

POWER CITYNEWS HUBBALLI/KUNDAGOL

ಹುಬ್ಬಳ್ಳಿ: ಕುಂದಗೋಳ / ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿಸಂಹಿತೆ ಅನುಷ್ಠಾನಗೊಂಡ ದಿನದಿಂದ ಲೊಕಸಭಾ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಚುನಾವಣಾ ಅಕ್ರಮ ನಡೆಯದಂತೆ ಜಿಲ್ಲಾದ್ಯಂತ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ಅಧಿಕಾರಿಗಳು ಇಂದು ಕುಂದಗೋಳ ತಾಲೂಕಿನ ರಾಮನ ಕೊಪ್ಪ ಗ್ರಾಮದ ನಿಂಗಪ್ಪ ಎಂಬುವವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ 2.5ಕೋಟಿ ಹಣಕ್ಕೆ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಾಟ ಮಾಡುವ ಮೂಲಕ ಮನೆಗೆ ತಂದಿದ್ದ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಕುಂದಗೋಳ ತಾಲೂಕಿನ ರಾಮನ ಕೊಪ್ಪದ ಚೆಕ್ ಪೊಸ್ಟ್ ಬಳಿ ಅನುಮಾನಾಸ್ಪದವಾಗಿ ಬಂದ ಕಾರುಗಳನ್ನು ನಿಲ್ಲುವಂತೆ ಪೊಲೀಸರು ಸೂಚಿಸಿದ್ದಾರೆ.ಆದರೆ ಇವೇಳೆ ನಿಲ್ಲದ ಬ್ರೇಜಾ ಕಾರು ಹಾಗೂ ಹೊಂಡಾ wrv ಕಾರನ್ನು ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಹಾಗೂ ಪೊಲಿಸರು ಹಿಂಬಾಲಿಸಿದ್ದಾರೆ. ಇ ವೇಳೆಗೆ ಹಣದ ಬ್ಯಾಗಗಳೊಂದಿಗೆ ಗ್ರಾಮದ ನಿಂಗಪ್ಪ ಎಂಬ ಪ್ರಭಾವಿ ವ್ಯಕ್ತಿಯ ಮನೆಗೆ ತೆರಳಿದ್ದಾರೆ. ಈ ಸಮಯದಲ್ಲಿ ಕಾರು ಇಳಿದ ಐವರು ಹಣದ ಬ್ಯಾಗ ಸಮೇತ ಒಡಲು ಮುಂದಾಗಿದ್ದಾರೆ. ಆದರೆ ಪೊಲಿಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ.

ಕುಬಿಹಾಳ ಮೂಲದ ಮಾತೃ ಭೂಮಿ ಡೆವಲಪರ್ಸ್ ಹೆಸರಿನಲ್ಲಿ ಭೂಮಿ ಖರಿದಿ ವಿಚಾರವಾಗಿ ರೈತರೊಬ್ಬರಿಗೆ ಹಣ ನೀಡಲು ಬಂದಿದ್ದಾಗಿ ತಿಳಿಸಿದ್ದಾರೆ. ಆದರೆ ಅದಕ್ಕೆ ಪೂರಕ ವಾದ ದಾಖಲೆಗಳನ್ನು ಒದಗಿಸದೆ ಹಿನ್ನೆಲೆಯಲ್ಲಿ ಹಣ ವಶಕ್ಕೆ ಪಡೆದು ಎಣೆಕೆ ಮಾಡಿದ್ದು. ಅಕ್ರಮ ಹಣ ಸಾಗಾಟದ ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ.ಸ್ಥಳಕ್ಕೆ ಜಿಲ್ಲಾ ಪೊಲಿಸ್ ವರಿಷ್ಠಾದಿಕಾರಿ ಗೋಪಾಲ್ ಬ್ಯಾಕೋಡ್,ನಾರಾಯಣ್ ಭರಮಣಿ, ಶಿವಾನಂದ ಕಟಗಿ ಗ್ರಾಮಿಣ ಇನ್ಸ್ಪೆಕ್ಟರ್ ಮುರುಗೇಶ್ ಚೆನ್ನಣ್ಣವರ,ಶಿವಾನಂದ ಅಂಬಿಗೇರ ಸೇರಿದಂತೆ ಆದಾಯಾ ತೆರಿಗೆ ಇಲಾಖೆಯ ಅಧಿಕಾರಿಗಳು ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *