BREAKING NEWSDHARWADHubballiಧಾರವಾಡರಾಜ್ಯಹುಬ್ಬಳ್ಳಿ

ಮೂರು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿದ:ಬಾಬುರಾವ್ ಸಕ್ರಿ

Dhakani

PowerCityNews Dharwad : ಧಾರವಾಡ: ಇಂದು ರಂಗಾಯಣದ ಪಂ.ಬಸವರಾಜ ರಾಜುಗುರು ಬಯಲು ರಂಗಮಂದಿರದಲ್ಲಿ ಧಾರವಾಡ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದೊಂದಿಗೆ “ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ 03 ದಿನಗಳ ನಾಟಕೋತ್ಸವವನ್ನು ಸಕ್ಕರಿ ಬಾಳಾಚಾರ್(ಶಾಂತಕವಿ) ಟ್ರಸ್ಟ್‍ನ ಅಧ್ಯಕ್ಷ ಬಾಬುರಾವ್ ಸಕ್ಕರಿ ಅವರು ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದರು.

ಉತ್ತರ ಕರ್ನಾಟಕದಲ್ಲಿ ಮರಾಠಿ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದನ್ನು ಕಂಡು ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಿ ನಾಟಕ ಕಂಪನಿಯನ್ನು ಕಟ್ಟುವಲ್ಲಿ ಸಕ್ಕರಿ ಬಾಳಾಚಾರ್ಯರು ಮೊದಲಿಗರು.ಕನ್ನಡದಲ್ಲಿ ಹಲವಾರು ಕಾವ್ಯಗಳನ್ನು, ಅನುವಾದ ಹಾಗೂ ಇತರೆ ಕೃತಿಗಳನ್ನು ರಚಿಸಿದರು. ಕೀರ್ತನೆಗಳನ್ನು ರಚಿಸಿ ತಾವೇ ಹಾಡುತ್ತಿದ್ದರು. ಕನ್ನಡದಲ್ಲಿ “ಉಷಾಹರಣ” ಎಂಬ ಸ್ವತಂತ್ರ ನಾಟಕವನ್ನು ಪ್ರಥಮ ಬಾರಿಗೆ ರಚಿಸಿದ ಕೀರ್ತಿ ಅವರದು.ಯಾವುದೇ ರೀತಿ ಗುರುತಿಸಿಕೊಳ್ಳದೇ 65 ಕ್ಕಿಂತ ಹೆಚ್ಚು ಪುಸ್ತಕಗಳನ್ನು ರಚಿಸುವ ಮೂಲಕಆಧುನಿಕ ಕನ್ನಡರಂಗಭೂಮಿ ಹಾಗೂ ಸಾಹಿತ್ಯಕ್ಷೇತ್ರಕ್ಕೆ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ.ಅವರ ಸಾಹಿತ್ಯ, ಕೃತಿ ನುಡಿಗಳು ರಂಗಭೂಮಿಗೆ ಪೂರಕವಾಗಿವೆ. 1918 ರಲ್ಲಿ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲು ಬಾಳಾಚಾರ್ಯ ಅವರ ಸಹಕಾರ ಪ್ರಮುಖವಾಗಿದೆ ಎಂದು “ಶಾಂತಕವಿಗಳ ಬದುಕು ಬರಹ” ಕುರಿತು ಉಪನ್ಯಾಸ ನೀಡಿದಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಡಾಗುರುನಾಥ ಬಡಿಗೇರ ಹೇಳಿದರು.

ರಂಗಾಯಣವು ಸಕ್ಕರಿ ಬಾಳಾಚಾರ್ ಅವರ ಹೆಸರಿನಲ್ಲಿ ಮೂರು ದಿನದ ನಾಟಕೋತ್ಸವ ಆಯೋಜಿಸುವ ಮೂಲಕ ರಂಗಾಸಕ್ತರಿಗೆ ಮನರಂಜನೆಯನ್ನು ಉಣ ಬಡಿಸುತ್ತದೆ. ಆದ್ದರಿಂದ ಎಲ್ಲ ಸಾಹಿತಿಗಳು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಭೂಮಿ ಬೆಳವಣಿಗೆ ಸಹಕಾರ ನೀಡಬೇಕೆಂದು ರಂಗಾಯಣ ನಿರ್ದೇಶಕ ಡಾ.ರಾಜು ತಾಳಿಕೋಟೆ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಗಾಯತ್ರಿ ಮಹಾದೇವ, ರಂಗ ಸಮಾಜ ಸದಸ್ಯರಾದ ಮಹಾಂತೇಶ ಗಜೇಂದ್ರಗಡ, ಸಕ್ಕರಿ ಬಾಳಾಚಾರ್(ಶಾಂತಕವಿ) ಟ್ರಸ್ಟ್‍ನ ಕಾರ್ಯದರ್ಶಿ ಹನುಮೇಶ ಸಕ್ಕರಿ, ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ವೀ ಹುಡೇದ, ಅನಿಲ ಮೇತ್ರಿ, ಅನುರಾಗ ಸಾಂಸ್ಕøತಿಕ ಬಳಗ ತಂಡದವರು ಆರತಿ ದೇವಶಿಕಾಮಣಿ, ಜೋಗಿ ರಚಿಸಿ, ಡಾ.ಪ್ರಕಾಶ ಗರುಡ ನಿರ್ದೇಶಿಸಿದ ವಿಶ್ವಾಮಿತ್ರ ಮೇನಕೆ ಡಾನ್ಸ ಮಾಡೋದು ಏನಕೆ ನಾಟಕವನ್ನು ಗೊಂಬೆ ಮನೆ ತಂಡ ಪ್ರಸ್ತುತ ಪಡಿಸಿದರು.

Related Articles

Leave a Reply

Your email address will not be published. Required fields are marked *