ಸ್ಥಳೀಯ ಸುದ್ದಿ
DPL- ಕ್ರೀಡಾಕೂಟಕ್ಕೆ ಚಾಲನೆ
ಧಾರವಾಡ
ಧಾರವಾಡ ನಗರದಲ್ಲಿ ಫೆಬ್ರವರಿ 16 ರಿಂದ _26 ರವರೆಗೆ ನಡೆಯಲಿರುವ ಧಾರವಾಡ ಪ್ರೀಮಿಯರ್ ಲೀಗ್ ಕ್ರಿಕೇಟ್ ಟೂರ್ನಾಮೆಂಟಗೆ ಇಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಹಾಗೂ ಕಾಂಗ್ರೆಸ ಮುಖಂಡರಾದ ಶಿವಲೀಲಾ ಕುಲಕರ್ಣಿ ಅವರು ಚಾಲನೆ ನೀಡಿದ್ರು.
ಕ್ರಿಕೇಟ್ ಅಭಿಮಾನಿಗಳಿಗೆ ಧಾರವಾಡದ DPL. ಟೂರ್ನಾಮೆಂಟ್ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದು, ಹಲವಾರು ರೋಚಕತೆಯಿಂದ ಈ ಆಟ ಶುರುವಾಗಿದೆ.
ಧಾರವಾಡ ಕವಿವಿ ಮೈದಾನದಲ್ಲಿ ಈ ಟೂರ್ನಾಮೆಂಟ ನಡೆಯುತ್ತಿದ್ದು, ಎಲ್ಲರಿಗೂ ಶುಭವಾಗಲಿ ಎಂದು ಮಾಜಿ ಸಚಿವರಾದ ವಿನಯ ಕುಲಕರ್ಣಿ ಅವರು ನಿನ್ನೆಯಷ್ಟೇ ಬೆಂಗಳೂರಿನಿಂದ ಶುಭ ಹಾರೈಸಿದ್ದರು. ಇಂದು ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕ್ರೀಡಾಪಟುಗಳಿಗೆ ಪ್ರೋತ್ಸಹ ಕೊಟ್ಟು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ರು.