POWER CITYNEWS:HUBLI
ಹುಬ್ಬಳ್ಳಿ: ಸತತ ಎರಡು ದಿನಗಳಿಂದ ವೈದ್ಯರಿಲ್ಲದೆ ಹಾಗೂ ಅಂಬ್ಯುಲೆನ್ಸ್ ಸೇವೆ ಇಲ್ಲದೆ ರೋಗಿಗಳು ಪರದಾಡಿದ ಘಟನೆ ಆನಂದನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ವಾರ್ಡ್ ನಂಬರ್ 38ರಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಸುತ್ತಮುತ್ತಲಿನ ಪ್ರದೇಶದ ಜನರು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದ ಹಿನ್ನೆಲೆಯಲ್ಲಿ. ಸರ್ಕಾರಿ ವೈದ್ಯಕೀಯ ಸೇವೆ ಪಡೆಯಲು ಬಡವರು ದಿನಂಪ್ರತಿ ದೂರದ ಆಸ್ಪತ್ರೆಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಅನಂದ ನಗರದ ಸುತ್ತಮುತ್ತಲಿನ ಬಡವರಿಗೆ ಅನುಕೂಲವಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸರಿಯಾದ ಸಮಯಕ್ಕೆ ಬಾರದೆ ರೋಗಿಗಳನ್ನ ಘಂಟೆ ಗಟ್ಟಲೆ ಆಸ್ಪತ್ರೆಯಲ್ಲಿ ಕೂಡಿಸಿ ಚಿಕಿತ್ಸೆಯನ್ನು ನೀಡದೆ ಸತಾಯಿಸುತ್ತಾರೆ ಎನ್ನುವ ಆರೋಪ ಕೇಳಿಬಂದಿದೆ.ಸರ್ಕಾರ ಬಡವರ ಅನುಕೂಲಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚುಮಾಡಿ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿದ್ದರು ಸಹ ಸಮಯಕ್ಕೆ ಸರಿಯಾಗಿ ಸರ್ಕಾರಿ ವೇತನ ಪಡೆಯುವ ವೈದ್ಯರು ಸೇವೆಗೆ ಮಾತ್ರ ಬೇಕಾಬಿಟ್ಟಿ ಸಮಯಕ್ಕೆ ಬರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನೂ ಪಾಲಿಕೆ ಸದಸ್ಯ ಇಂಬ್ರಾಣ ಎಲಿಗಾರ ಕೂಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಸಿಬ್ಬಂದಿಗಳ ನಡೆಯನ್ನ ಖಂಡಿಸಿ ಎಚ್ಚರಿಕೆ ನೀಡಿದ ಬಳಿಕವೂ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಮೊಂಡುತನ ಮುಂದುವರೆಸಿದ್ದು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸುವುದು ಸೂಕ್ತ ಎನ್ನಬಹುದು.