POWERCITY NEWS : HUBLI
ರಾಜಕೀಯ:
ಬೆಂಗಳೂರು: ಇಂದು ಸಾಯಂಕಾಲ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯ ಹಿನ್ನೆಲೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ ಬೆಲ್ಲದ್ ಅವರು ಸಭೆಗೂ ಮುನ್ನವೆ ಜೊತೆಗೂಡಿರುವ ಕಂಡು ಬಂದ ಈ ಇಬ್ಬರ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ಇಂದು ಬೆಳಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಆರ್‌ಟಿ ನಗರದ ಮನೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರು ಒಟ್ಟಿಗೆ ಬಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬಿಜೆಪಿಗೆ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಉತ್ತರ ಕರ್ನಾಟಕದ ಭಾಗದವರಿಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬಿಜೆಪಿ ಮತ ಬ್ಯಾಂಕ್ ಇರುವ ಉತ್ತರ ಕರ್ನಾಟಕದವರಿಗೆ ಆದ್ಯತೆ ನೀಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಬೊಮ್ಮಾಯಿ ಜತೆ ಇಬ್ಬರು ನಾಯಕರು ಚರ್ಚಿಸಿದ್ದಾರೆ.
ಇನ್ನೂ ಶಾಸಕಾಂಗ ಪಕ್ಷದ ಸಭೆಯ ಮುನ್ನ ದೆಹಲಿಯಿಂದ ಆಗಮಿಸಿದ ಕೇಂದ್ರದ ವೀಕ್ಷಕರು ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಮತ್ತು ದುಷ್ಯಂತ್ ಗೌತಮ್ ಕುಮಾರ್ ಬೆಳಗ್ಗೆ ಧವಳಗಿರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ಬಿಜೆಪಿಯಲ್ಲಿನ ಮುಂದಿ ಬದಲಾವಣೆ ಗಳೆನು ಎಂಬುವುದು ಕೂತುಹಲ ಮೂಡಿಸಿದೆ.