
ಧಾರವಾಡದಲ್ಲಿ ಧಾರಾಕಾರ ಮಳೆ
ಧಾರವಾಡ
ಧಾರವಾಡ ನಗರ ಸೇರಿದಂತೆ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಆಗಿದ್ದು, ಕಲಘಟಗಿ ತಾಲೂಕಿನ ಹುಲ್ಲಂಬಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ.
ಬಿಸಿಲ ಬೇಗೆಯಿಂದ ಹೈರಾಣಾಗಿದ್ದ ಜನರಿಗೆ ಮಳೆರಾಯ ತಂಪೆರೆದು ರೈತಾಪಿ ವರ್ಗಕ್ಕೂ ಅನುಕೂಲ ಮಾಡಿದ್ದಾನೆ.
ಸುಮಾರು 2 ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಜನರು ಮಳೆಗಾಲವನ್ನು ನೆನೆಯುವಂತಾಯಿತು.