Body buildersDHARWADGood jobSports

ಮೈಸೂರು ದಸರಾ ರಾಜ್ಯ ಮಟ್ಟದ “ಬಾಡಿ ಬಿಲ್ಡ್ ಸ್ಪರ್ಧೆ” ವಿಜೇತರಿಗೆ ಸನ್ಮಾನ!

Body build winners

POWERCITY NEWS :

ಹುಬ್ಬಳ್ಳಿ

ಇತ್ತೀಚೆಗಷ್ಟೆ ಮೈಸೂರಿನಲ್ಲಿ ನಡೆದ 2023ರ ರಾಜ್ಯಮಟ್ಟದ ದಸರಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧಾರವಾಢ ಜಿಲ್ಲೆಯ 8 ಬಾಡಿ ಬಿಲ್ಡರ್ ಸ್ಪರ್ಧಾಳುಗಳು ವಿಜೇತರಾಗುವ ಮೂಲಕ ಪದಕಗಳನ್ನು ತಮ್ಮ ಮೂಡಿಗೆರಿಸಿಕೊಂಡು ಸಾಧನೆಗೈದಿರುವುದಲ್ಲದೆ ಧಾರವಾಢ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವ ಎಲ್ಲ ದೇಹಧಾರ್ಢ್ಯ ಕ್ರೀಡಾ ಪಟುಗಳನ್ನು ಧಾರವಾಢ ಜಿಲ್ಲಾ ಬಾಡಿ ಬಿಲ್ಡರ್ಸ್ ಸಂಸ್ಥೆಯವತಿಯಿಂದ ಸನ್ಮಾಸಿ ಗೌರವಿಸಿದೆ.

ನಗರದ ದೇಶಪಾಂಡೆ ನಗರದಲ್ಲಿನ ಸಂಸ್ಥೆಯ ಮುಖ್ಯ ಕಚೇರಿ ಜೈ ಹೋ ಹೆಲ್ತ್ ಫಿಟ್ನೆಸ್‌ನಲ್ಲಿ ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇ ವೇಳೆ 12/10/2023 ರಂದು ನಡೆದ ಮೈಸೂರು ದಸರಾ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ದೇಯಲ್ಲಿ ಕರ್ನಾಟಕದ ಎಲ್ಲ ಭಾಗದಿಂದಲೂ ಆಗಮಿಸಿದ್ದ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳನ್ನ ಎದುರಿಸಿ ಆಯಾ ವಿಭಾಗದ ತೂಕದಲ್ಲಿನ ಸ್ಪರ್ಧಿಗಳನ್ನು ಹಿಂದಿಕ್ಕುವ ಮೂಲಕ ವಿಜೇತರಾಗಿ ಹೊರಹೊಮ್ಮಿರುವ ಧಾರವಾಢ ಜಿಲ್ಲೆಯ 8 ದೇಹಧಾರ್ಢ್ಯ ಕ್ರೀಡಾಪಟುಗಳಾದ

  1. ಕೃಷ್ಣ ಬಿಳೇತಳಿ-80ಕೆಜಿ- ಬೆಳ್ಳಿ ಪದಕ
  2. 2.ಮಂಜುನಾಥ್ ಕಂಪ್ಲಿ-55ಕೆಜಿ-ಕಂಚಿನ ಪದಕ

3.ನವೀನ್ ಹೊಸಮನಿ-75ಕೆಜಿ

4.ತೌಸಿಫ್ ದೊಡ್ವಾಡ್-55ಕೆಜಿ

5.ರಮೇಶ್ ಅಂಬಿಗೇರ್-70ಕೆಜಿ

6.ಹುಸೇನ್ ಸಯ್ಯದ್-80ಕೆಜಿ

7.ಸಾದಿಕ್ ತಡಕೋಡ್-85ಕೆಜಿ

8.ಉಮೇಶ್ ಅಮರಾವತಿ-65ಕೆಜಿ

ಇನ್ನೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಾಗವಹಿಸಿ ಪದಕ ಪಡೆದು ಸಾಧನೆಗೈದ ಧಾರವಾಢ ಜಿಲ್ಲೆಯ 8 ಸ್ಪರ್ಧಿಗಳಿಗಳಿಗೆ ಮುಖ್ಯ ಅತಿಥಿಯಾಗಿ ಅಗಮಿಸಿದ್ದ ರವಿ ಬಂಕಾಪುರ ವಿಜೇತರನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಿದರು.ಇ ವೇಳೆ ನಟ ಹಾಗೂ ದೇಹಧಾರ್ಢ್ಯ ತರಬೇತುದಾರರಾದ ಕೃಷ್ಣ ಚಿಕ್ಕತುಂಬಳ ಅವರು ಕಾರ್ಯಕ್ರಮ ನಿರೂಪಿಸಿದರು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ : ಎಂ.ಡಿ ಸಲೀಂ ಗೌರ್, ಕಾರ್ಯದರ್ಶಿ: ಆಸಿಫ್ ಇಕ್ಬಾಲ್ ಕುಸುಗಲ್, ಖಜಾಂಚಿ : ಕೃಷ್ಣ ಚಿಕ್ಕತುಂಬಳ, ಸದಸ್ಯರು:ಶ್ರೀ ಕುಶಾಲ ಮಾಳಶೇಟ್, ಶ್ರೀ ಅರವಿಂದ ಎಚ್ ಮತ್ತು ಶ್ರೀ ಲೋಕೇಶ ಭೋಸಲೆ ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button