ಸ್ಥಳೀಯ ಸುದ್ದಿ

ವಿನಯ್ ಇಲ್ಲದಿದ್ದರೂ ಸಾಗರದಂತೆ ಹರಿದು ಬಂದ ಜನ: ಶಕ್ತಿ ಪ್ರದರ್ಶಿಸಿದ ಶಿವಲೀಲಾ ಕುಲಕರ್ಣಿ

ಧಾರವಾಡ

ಅದೊಂದು ಅದ್ಧೂರಿ ಮೆರವಣಿಗೆ ಧಾರವಾಡದ ಮುರುಘಾಮಠದಿಂದ ನಿಂತಿದ್ದ ಜನ ಇತ್ತ ಸಿಬಿಟಿವರೆಗೂ ಸಾಗರದಂತೆ ನಿಂತಿತ್ತು. ಅವರ ಮೇಲಿನ ಅಭಿಮಾನಕ್ಕೆ ಜನ ಅವರ ಕಟೌಟ್‌ಗೆ ಕ್ಷೀರಾಭಿಷೇಕವನ್ನೇ ಮಾಡಿದರು. ಈ ಅದ್ಧೂರಿ ದೃಶ್ಯ ಕಂಡು ಬಂದದ್ದು ಧಾರವಾಡದಲ್ಲಿ.

ಹೌದು! ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದು, ಇಂದು ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಶಕ್ತಿ ಪ್ರದರ್ಶನದೊಂದಿಗೆ ಅಧಿಕೃತವಾಗಿ ವಿನಯ್ ಅವರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಉಮೇದುವಾರಿಕೆ ಸಲ್ಲಿಕೆಯ ರ್‍ಯಾಲಿಯಲ್ಲಿ ಈ ಎಲ್ಲಾ ದೃಶ್ಯಗಳು ಕಂಡು ಬಂದವು.

ಧಾರವಾಡದ ಪ್ರಸಿದ್ಧ ಮುರುಘಾಮಠದಿಂದ ಮೆರವಣಿಗೆ ಮೂಲಕ ಧಾರವಾಡದ ಉಪವಿಭಾಗಾಧಿಕಾರಿ ಕಚೇರಿಗೆ ಬಂದ ಶಿವಲೀಲಾ ಅವರು, ವಿನಯ್ ಅವರ ನಾಮಪತ್ರ ಸಲ್ಲಿಸಿದರು. ವಿನಯ್ ಕುಲಕರ್ಣಿ ಅವರ ಸ್ಪರ್ಧೆಯಿಂದ ಧಾರವಾಡ ಗ್ರಾಮೀಣ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ವಿನಯ್ ಅವರ ಮೇಲಿನ ಅಭಿಮಾನಕ್ಕಾಗಿ ಅವರ ನಾಮಪತ್ರ ಸಲ್ಲಿಕೆ ವೇಳೆ ಲಕ್ಷಾಂತರ ಜನ ಆಗಮಿಸಿ ವಿನಯ್ ಅವರ ಉಮೇದುವಾರಿಕೆಗೆ ಸಾಕ್ಷಿಯಾದರು. ಪ್ರತಿಯೊಬ್ಬರ ಕೈಯಲ್ಲಿ ವಿನಯ್ ಅವರ ಚಿಕ್ಕ ಚಿಕ್ಕ ಕಟೌಟ್‌ಗಳು ರಾರಾಜಿಸುತ್ತಿದ್ದವು. ಪ್ರತಿಯೊಬ್ಬರೂ ವಿನಯ್ ಅವರ ಮುಖವಾಡ ಧರಿಸಿ ವಿನಯ್ ಇಲ್ಲದಿದ್ದರೂ ಅವರಂತೆಯೇ ಗೋಚರಿಸಿ ರ್‍ಯಾಲಿಯಲ್ಲಿ ಗಮನಸೆಳೆದರು.

ರಸ್ತೆಯ ಇಕ್ಕೆಲಗಳಲ್ಲೂ ಜನ ನಿಂತು ರ್‍ಯಾಲಿಗೆ ಬೆಂಬಲಿಸಿದರು. ಈ ರ್‍ಯಾಲಿಯಲ್ಲಿ ವಿನಯ್ ಅವರ ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್ ಅವರು ಪಾಲ್ಗೊಂಡು ಜನರತ್ತ ಕೈಬೀಸಿ ತಮ್ಮ ತಂದೆಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ವಿನಯ್ ಅವರು ಕುದುರೆ ಸವಾರಿಯಲ್ಲಿ ಎತ್ತಿದ ಕೈ. ಹೀಗಾಗಿ ಅವರ ಅಭಿಮಾನಿಗಳು ರ್‍ಯಾಲಿಯಲ್ಲಿ ಎರಡು ಕುದುರೆಗಳನ್ನೂ ತಂದು ಗಮನಸೆಳೆದರು.

ತೆರೆದ ವಾಹನದ ಮೂಲಕ ಶಿವಲೀಲಾ ಅವರು ಮೆರವಣಿಗೆ ನಡೆಸಿದರು. ವಿನಯ್ ಅವರ ಅಭಿಮಾನಿಗಳು ತೆರೆದ ವಾಹನದ ಮೇಲಿದ್ದ ನಾಯಕರ ಮೇಲೆ ಹೂಮಳೆಗರೆದರು. ಅಲ್ಲದೇ ಕ್ರೇನ್ ಮೂಲಕ ಮಾಲಾರ್ಪಣೆ ಹಾಗೂ ವಿನಯ ಕುಲಕರ್ಣಿಯವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದು ಕಣ್ಮಣ ಸೆಳೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ ವಿಕೆ ಬಾಸ್‌ಗೆ ಜೈ ಎನ್ನುವ ಘೋಷಣೆಗಳನ್ನು ಕೂಗಿದರು. ಧಾರವಾಡ ಗ್ರಾಮೀಣ ಕ್ಷೇತ್ರದ ಎಲ್ಲಾ ಹಳ್ಳಿಗಳಿಂದಲೂ ಲಕ್ಷಾಂತರ ಜನ ವಾಹನಗಳ ಮೂಲಕ ಬಂದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಶಿವಲೀಲಾ ಅವರು ಉಪವಿಭಾಗಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದ ವೇಳೆ ಮಾಜಿ ಸಚಿವ ಹಾಗೂ ಕಲಘಟಗಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಕೂಡ ಅವರಿಗೆ ,ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಸಾಥ ನೀಡಿದರು. ನೀಡಿದರು.

ಒಟ್ಟಾರೆ ವಿನಯ್ ಕುಲಕರ್ಣಿ ಅವರ ನಾಮಪತ್ರ ಅದ್ಧೂರಿ ಶಕ್ತಿ ಪ್ರದರ್ಶನದೊಂದಿಗೆ ಸಲ್ಲಿಕೆಯಾಗಿದೆ. ಲಕ್ಷಾಂತರ ಜನ ರ್‍ಯಾಲಿಯಲ್ಲಿ ಪಾಲ್ಗೊಂಡು ರ್‍ಯಾಲಿ ಯಶಸ್ವಿಗೊಳಿಸಿದರು.

Related Articles

Leave a Reply

Your email address will not be published. Required fields are marked *

Back to top button