ಧಾರವಾಡರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪೊಲಿಸ್ ಕುರಿತು ಗೃಹ ಸಚಿವರ ಹೆಳಿಕೆಗೆ ತಿರುಗೇಟು ಕೊಟ್ಟ ಕಾಂಗ್ರೆಸ್ ಮುಖಂಡ

ಹುಬ್ಬಳ್ಳಿ- ಪೊಲಿಸರು ಸದಾ ರಾಷ್ಟ್ರ ಮತ್ತು ಸಮಾಜ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಾರೆ ಎನ್ನುವುದರ ಪರಿಜ್ಞಾನವು ಇಲ್ಲದೆ ಪೊಲಿಸರನ್ನ ನಾಯಿಗೆ ಹೊಲಿಸಿ ಮಾತನಾಡಿರುವ ಗೃಹ ಸಚಿವರು ಹೊಟ್ಟೆಗೆ ಏನು ತಿನ್ನಬಹುದು ? ಎಂದು ಎಐಸಿಸಿ ಕಾರ್ಯಾಧ್ಯಕ್ಷ ಬಿ.ಕೆ.ಹರಿಪ್ರದಾಸ್ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.
.

ಹೌದು ಗೃಹ ಸಚೀವ ಅರಗ ಜ್ಞಾನೇಂದ್ರರವರು ಅಕ್ರಮ ಗೋಸಾಗಾಟ ವನ್ನು ತಡೆಯುವ ಕುರಿತು ಪೊಲಿಸ್ ಅಧಿಕಾರಿಯೊಬ್ಬರಿಗೆ ಅವಾಚ್ಯವಾಗಿ ಶಬ್ದ ಬಳಸಿ ತರಾಟೆಗೆ ತೆಗೆದು ಕೊಂಡಿದ್ದಲ್ಲದೇ, ಪೊಲಿಸರು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಅಕ್ರಮ ಗೊಸಾಗಾಟವನ್ನ ಹತ್ತಿಕ್ಕುವಲ್ಲಿ ಯಶಸ್ವಿಯಾಗುತ್ತಿದ್ದರು.
ಆದರೆ ಪೊಲಿಸರು ಕಾನೂನನ್ನು ಸರಿಯಾಗಿ ಸದ್ಬಳಕೆ ಮಾಡಿ ಕೊಳ್ಳದೇ ಕೇವಲ ಕವಡೆ ಕಾಸಿಗೆ ಆಸೆ ಪಟ್ಟು ಗೊ ಸಾಗಾಟಕ್ಕೆ ಸಾಥ್ ನೀಡ್ತಿದ್ದಾರೆ. ಮೇಲಾಗಿ ಸರ್ಕಾರ ಇವರಿಗೆ ಸಂಬಳದ ಜೊತೆಗೆ ಅನೇಕ ಸವಲತ್ತುಗಳನ್ನು ಕೊಡುತ್ತಿದ್ದರೂ ಸಹ, ಎಂಜಲು ಮುಕ್ಕುವುದು ಮಾತ್ರ ಬಿಡೋಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು .

ಅಲ್ಲದೆ ತಮ್ಮದೆ ಇಲಾಖೆಯ ರಾಜ್ಯ ಪೊಲಿಸರ ಮೆಲೆ ಹರಿಹಾಯ್ದಿರುವ ವಿಡಿಯೋ ವನ್ನ ಶಿವಮೊಗ್ಗ ಜಿಲ್ಲೆಯ ಗೃಹ ಸಚಿವರ ಗೃಹ ಕಚೇರಿಯಲ್ಲೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಹಿನ್ನೆಲೆಯಲ್ಲಿ MLC ಚುನಾವಣೆ ಪ್ರಚಾರಕ್ಕೆ ಧಾರವಾಡದ ಕುಂದಗೋಳ ಗ್ರಾಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಬಿ ಕೆ ಪ್ರಸಾದ್ ಸುದ್ದಿಗಾರರೊಂದಿಗೆ ಮಾತನಾಡಿ.ಗೃಹ ಸಚಿವರು ಒತ್ತಡದಲ್ಲಿ ಕೆಲಸಮಾಡುವ ಪೊಲೀಸರ ಪೈಕಿ ಕೆಲವು ಅಧಿಕಾರಿಗಳು ತಪ್ಪು ಮಾಡಿರಬಹುದು‌. ಆದರೆ ಎಂಜಲು ತಿನ್ನುವ ನಾಯಿಗಳು ಎಂದು ಹಗುರವಾಗಿ ಮಾತನಾಡಿರುವುದು. ಸಾರ್ವಜನಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಪೊಲಿಸ್ ಇಲಾಖೆಗೆ ಇಂತಹ ಪದಗಳು ಶೋಭೆಯಲ್ಲ ಎಂದರು.

ಇನ್ನೂ ಇ ಬಾರಿಯ
ಎಂಎಲ್ ಸಿ ಚುಣಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಸಲಿಂ ಅಹ್ಮದ ಗೆಲುವು ನಿಶ್ಚಿತ: ಹಾವೇರಿ,ಗದಗ,ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾಗುವ ಚುನಾವಣೆಗೆ ಸಲೀಂ ಅಹ್ಮದ್ ಅವರು ಪರವಾಗಿ ಪ್ರಚಾರ ಮಾಡಲು ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ‌. ಆದಷ್ಟೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡಿದ್ದೇವೆ. ಅವರ ಉತ್ಸಾಹ ನೋಡಿದ್ರೆ ಈ ಬಾರಿ ಬಿಜೆಪಿಗೆ ಸೋಲು ಖಚಿತ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾವೇರಿಯಲ್ಲಿ ಸ್ವತಂತ್ರ ಅಭ್ಯರ್ಥಿ ನಿಂತಿರುವುದರಿಂದ ನಮಗೆ ಯಾವುದೇ ರೀತಿ ಹಿನ್ನಡೆಯಾಗುವದಿಲ್ಲ. ಬದಲಾಗಿ ಬಿಜೆಪಿಗೆ ಹಿನ್ನಡೆ ಆಗಬಹುದು. ಸ್ವತಂತ್ರ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಪ್ತರಾಗಿದ್ದು ಅವರನ್ನು ಏಕೆ ನಿಲ್ಲಿಸಿದ್ದಾರೆ.
ಎಂಬುದನ್ನು ಅವರೇ ಹೇಳಬೇಕು.

ಈ ಬಾರಿ ಸಲೀಂ ಅಹ್ಮದ್ ಬಹುಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು
ಬಿಕೆ ಹರಿಪ್ರಸಾದ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button