assemblyBELAGAVIBREAKING NEWSDHARWADHubballiPolitical news

ಸುಕ್ಷೇತ್ರ“ನಯಾ ನಗರ”ದ ಕಾರ್ತಿಕೋತ್ಸವದಲ್ಲಿ ಶಾಸಕ“ವಿನಯ ಕಲಕರ್ಣಿ” ಮಾಡಿದ್ದೇನು!

VK@NAYANAGAR

POWER CITY NEWS: HUBBALLI

ಹುಬ್ಬಳ್ಳಿ/ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಛಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿ ಸಂಜೆ ವೇಳೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುಪ್ರಸಿದ್ಧ ಸುಕ್ಷೇತ್ರದಲ್ಲಿ ನಡೆದ ಕಾರ್ತಿಕೋತ್ಸವದಲ್ಲಿ ಜನಪ್ರೀಯ ಗ್ರಾಮಿಣ ಶಾಸಕ ವಿನಯ ಕುಲಕರ್ಣಿಯವರು ತಮ್ಮ ನೂರಾರು ಅಭಿಮಾನಿಗಳೊಂದಿ‌ಗೆ ಮಠಕ್ಕೆ ಆಗಮಿಸಿ ಸಾಮೋಹಿಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಪ್ರತಿ ದೀಪಾವಳಿ ಅಮಾವಾಸ್ಯೆಯ ನಂತರ ಬರುವ ಕಾರ್ತಿಕ ಅಮವಾಸ್ಯೆಯ ದಿನದಂದು ಹಿಂದೂ ಸಂಪ್ರದಾಯದಂತೆ ಮಠ,ಮಂದಿರಗಳಲ್ಲಿ ಲಕ್ಷ ಲಕ್ಷ ಹಣತೆಗಳೊಂದಿಗೆ ದೀಪ ಹಚ್ಚುವ ಮೂಲಕ ಆಚರಿಸಲ್ಪಡುವ ಕಾರ್ತಿಕೋತ್ಸವದ ಆಚರಿಸಿದರು. ನಯಾನಗರದ ಮಠದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಸಕ‌ ವಿನಯ ಕುಲಕರ್ಣಿವರು ಪಾಲ್ಗೊಂಡಿದ್ದರು.

“ಓಂ”ಎನ್ನುವ ಪದನಾಮದ ಕಾರ್ತಿಕ ಮಂಗಳಾರತಿ ಬೆಳಗಿದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಹಾಗೂ ಅತಿಥಿಗಳು ನಾಡಿನೆಲ್ಲೇಡೆ ಒಳಿತಾಗಲಿ ಎಂದು ಪ್ರಾರ್ಥಸಿದ್ರು. ಬಳಿಕ ಸಾಮೂಹಿಕವಾಗಿ ಕುಳಿತು ಸಾಂಪ್ರದಾಯಿಕವಾಗಿ ಮಠದಿಂದ ನೀಡಲಾದ ಪಳಾರವನ್ನು ಸ್ವೀಕರಿಸಿದ್ರು. ದೂರದ ಊರುಗಳಿಂದ ನಾನಾ ಭಕ್ತರು ಈ ಕಾರ್ತಿಕೋತ್ಸವದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಕಾಂಗ್ರೆಸ್ ಮುಖಂಡ ‌ತವನಪ್ಪ ಅಷ್ಟಗಿ, ನಯಾನಗರ ಊರಿನ ಗುರು ಹಿರಿಯ ಪ್ರಮುಖರು , ಹಾಗೂ ಸಮಸ್ತ ಭಕ್ತ ಮಂಡಳಿ ಕಾರ್ಯಕ್ರಮಕ್ಕೆ ‌ಸಾಕ್ಷಿಯಾಯಿತು.‌

Related Articles

Leave a Reply

Your email address will not be published. Required fields are marked *

Back to top button